ಹಾಸನ: ಜಿಲ್ಲೆಯ ಒಂದೇ ಕುಟುಂಬದ ಐವರಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಇದರಿಂದ ಜಿಲ್ಲೆಯ ಜನರಲ್ಲಿ ಆತಂಕ ಕಾಣಿಸಿಕೊಂಡಿದೆ. ಮುಂಬೈ ಹಾಗೂ ಕೋಲ್ಕತ್ತಾದಿಂದ ಬಂದಿದ್ದ 171 ಮಂದಿಯನ್ನು ಚನ್ನರಾಯಪಟ್ಟಣದ ಮೊರಾರ್ಜಿ ಶಾಲೆಯಲ್ಲಿ ಕ್ವಾರಂಟೈನ್ ಮಾಡಲಾಗಿತ್ತು.
ಹಾಸನದ ಒಂದೇ ಕುಟುಂಬದ ಐವರಿಗೆ ವಕ್ಕರಿಸಿದ ಸೋಂಕು..! - five members of same family
ಹಾಸನ ಜಿಲ್ಲೆಯಲ್ಲಿ ಒಂದೇ ಕುಟುಂಬದ ಐವರಲ್ಲಿ ಸೋಂಕು ಕಾಣಿಸಿಕೊಂಡಿದ್ದು, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.
![ಹಾಸನದ ಒಂದೇ ಕುಟುಂಬದ ಐವರಿಗೆ ವಕ್ಕರಿಸಿದ ಸೋಂಕು..! corona in hasan](https://etvbharatimages.akamaized.net/etvbharat/prod-images/768-512-7164617-thumbnail-3x2-raaaa.jpg)
ಹಾಸನದಲ್ಲಿ ಕೊರೊನಾ
ಕೆಲ ದಿನಗಳ ಹಿಂದೆ ಅವರ ರಕ್ತ ಪರೀಕ್ಷೆ ಹಾಗೂ ಗಂಟಲು ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿತ್ತು. ಅದರಲ್ಲಿ ಮುಂಬೈನಿಂದ ಬಂದಿದ್ದ ವ್ಯಕ್ತಿಗಳಲ್ಲಿ ಕೊರೊನಾ ಸೋಂಕು ದೃಢಪಟ್ಟಿದೆ. ಈಗ ಅವರನ್ನು ಹಾಸನ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.