ಕರ್ನಾಟಕ

karnataka

ETV Bharat / state

ನವೆಂಬರ್​ 29-30 ರಂದು ಹಾಸನದಲ್ಲಿ ರಾಷ್ಟ್ರಮಟ್ಟದ ಮಕ್ಕಳ ಸಾಹಿತ್ಯ ಸಮ್ಮೇಳನ - Baraguru Ramachandrappa

ನವೆಂಬರ್​ 29-30 ರಂದು ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗಲಿದೆ.

ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನ

By

Published : Nov 11, 2019, 9:31 AM IST

Updated : Nov 11, 2019, 10:58 AM IST

ಹಾಸನ: ಹಳೆ ಬೇರು-ಹೊಸ ಚಿಗುರು, ಮರ ಸೊಬಗು ಎಂಬ ನಾಣ್ನುಡಿಯಂತೆ ಮರ ಸೊಬಗನ್ನ ಕೊಡಬೇಕಾದ್ರೆ ಬೇರು ಗಟ್ಟಿಯಾಗಿರಬೇಕು. ಅಂತಹ ಕಾರ್ಯವನ್ನ ಮಕ್ಕಳ ಸಾಹಿತ್ಯ ಪರಿಷತ್ ಹುಟ್ಟುಹಾಕುತ್ತಿದೆ ಎಂದು ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ ನುಡಿದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಆದಿಚುಂಚನಗಿರಿ ಶಾಖಾ ಮಠದ ಶ್ರೀ ಶಂಭುನಾಥ ಸ್ವಾಮೀಜಿ

ನಗರದ ಆದಿಚುಂಚನಗಿರಿ ಶಿಕ್ಷಣ ಸಂಸ್ಥೆಯ ಆವರಣದಲ್ಲಿ ಮಕ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸಮ್ಮೇಳನಕ್ಕೆ ಮಕ್ಕಳನ್ನ ಆಯ್ಕೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು, ಒಂದು ವೃಕ್ಷ ಎತ್ತರಕ್ಕೆ ಬೆಳೆಯುವ ವೇಳೆ ಬೇರು ಬಹಳ ಚೆನ್ನಾಗಿ ಗಟ್ಟಿಯಾಗಿರಬೇಕಂತೆ. ಹಾಗೇ ಇಂದಿನ ಮಕ್ಕಳೆಂಬ ಬೇರುಗಳನ್ನ ಗಟ್ಟಿಗೊಳಿಸುತ್ತಾ ಸಾಹಿತ್ಯಾಸಕ್ತರನ್ನಾಗಿ ಮಾಡುವ ಸಲುವಾಗಿ ಮಸಾಪ ಅಧ್ಯಕ್ಷ ಚ.ನಾ. ಅಶೋಕ್ ಶ್ರಮ ಶ್ಲಾಘನೀಯ ಎಂದರು.

ಮಕ್ಕಳ ಕಾರ್ಯಕ್ರಮ ಎಂದರೆ ಮನಸ್ಸಿಗೆ ಮುದನೀಡುವ ಜೊತೆಗೆ ಸಂತೋಷವನ್ನುಂಟು ಮಾಡುತ್ತದೆ. 1985ರಲ್ಲಿಯೇ ಶ್ರೀ ಬಾಲಗಂಗಾಧರನಾಥ ಸ್ವಾಮೀಜಿ ಅಂದಿನ ಮುಖ್ಯಮಂತ್ರಿಯಾಗಿದ್ದ ರಾಮಕೃಷ್ಣ ಹೆಗ್ಗಡೆಯವರ ಸಹಕಾರದಿಂದ ಮಕ್ಕಳ ಸಮ್ಮೇಳನ ಮಾಡುವ ಮೂಲಕ ಮಕ್ಕಳಲ್ಲಿ ಸಾಹಿತ್ಯದ ಬೀಜವನ್ನ ಬಿತ್ತಿದ್ದರು. ಇಂದು ಕೂಡಾ ನಮ್ಮ ಮಠದ ಪೀಠಾಧ್ಯಕ್ಷರಾದ ಶ್ರೀ ನಿರ್ಮಲಾನಂದನಾಥ ಸ್ವಾಮಿಜೀಯವರು ಮತ್ತು ಶ್ರವಣಬೆಳಗೊಳದ ಚಾರುಕೀರ್ತಿ ಭಟ್ಟಾರಕ ಸ್ವಾಮೀಜಿಯವರ ಪೂರ್ಣ ಸಹಕಾರದೊಂದಿಗೆ ನ.29 ಮತ್ತು 30 ರಂದು ಅಖಿಲ ಭಾರತ ಮಕ್ಕಳ ಸಾಹಿತ್ಯ ಸಮ್ಮೇಳನ ಜರುಗುತ್ತಿರುವುದು ತುಂಬಾ ಖುಷಿಯ ವಿಚಾರ ಎಂದು ಸ್ವಾಮೀಜಿ ಹೇಳಿದರು.

ಇನ್ನು, ಈ ಸಮ್ಮೇಳನಕ್ಕೆ 100 ಮಕ್ಕಳಿಂದ ಕವನಗೋಷ್ಠಿ ಮತ್ತು ಭಾಷಣ ಸೇರಿದಂತೆ ವಿವಿಧ ವಿವಿಧ ವಿಭಾಗಗಳಿಗೆ ಅಧ್ಯಕ್ಷ ಗೋಷ್ಠಿಗಳಿಗೆ ಆಯ್ಕೆ ಮಾಡಲಾಗುವುದು. ನಮ್ಮ ರಾಜ್ಯವಲ್ಲದೇ ಕೇರಳ, ತಮಿಳುನಾಡು, ಆಂಧ್ರಪ್ರದೇಶ, ತೆಲಂಗಾಣ, ಗೋವಾ, ಮಹಾರಾಷ್ಟ್ರ, ದೆಹಲಿ, ಮಧ್ಯಪ್ರದೇಶ ಸೇರಿದಂತ ವಿವಿಧ ರಾಜ್ಯಗಳಲ್ಲಿರುವ ಕನ್ನಡಿಗರ ಮಕ್ಕಳು ಭಾಗವಹಿಸುತ್ತಿರುವುದು ವಿಶೇಷ.

ಇನ್ನು, ಎರಡು ದಿನಗಳ ಕಾಲ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಕರ್ನಾಟಕದ ಇತಿಹಾಸದಲ್ಲಿಯೇ ಪ್ರಥಮ ಅಖಿಲ ಭಾರತ ಕನ್ನಡ ಮಕ್ಕಳ ಸಾಹಿತ್ಯ ಸಮ್ಮೇಳನವು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಸಂಯುಕ್ತಾಶ್ರಯದಲ್ಲಿ ಜರುಗಲಿದೆ. ಸಮ್ಮೇಳನದ ಉದ್ಘಾಟನೆಯನ್ನು ಸಾಹಿತಿ ಬರಗೂರು ರಾಮಚಂದ್ರಪ್ಪ ಅವರು ನೆರವೇರಿಸಲಿದ್ದು, ಇದರಲ್ಲಿ ಮಕ್ಕಳೇ ಸಮ್ಮೇಳನದ ಅಧ್ಯಕ್ಷತೆಯಿಂದ ಹಿಡಿದು ಎಲ್ಲಾ ಕಾರ್ಯಕ್ರಮಕ್ಕೂ ಕೇಂದ್ರ ಬಿಂದುಗಳಾಗಿರುತ್ತಾರೆ ಎಂದು ಶಂಭುನಾಥ್​ ಸ್ವಾಮೀಜಿ ಮಾಹಿತಿ ನೀಡಿದ್ರು.

ಇನ್ನು ಇದೇ ವೇಳೆ ವಿವಿಧ ತಾಲ್ಲೂಕುಗಳಿಂದ ಬಂದಿದ್ದ ವಿದ್ಯಾರ್ಥಿಗಳಿಗೆ ಪ್ರಬಂಧ ರಚನೆ, ಆಶುಭಾಷಣ ಸ್ಪರ್ಧೆ, ಸ್ವರಚಿತ ಕವನ ವಾಚನ, ಉಕ್ತಲೇಖನ ಸೇರಿದಂತೆ ಹಲವು ಪರೀಕ್ಷೆಗಳನ್ನ ನೀಡು ಮೂಲಕ 286 ಮಕ್ಕಳನ್ನ ಆಯ್ಕೆ ಮಾಡಲಾಗಿದೆ. ಆಯ್ಕೆ ಸಮಿತಿಯಲ್ಲಿ ಚಿಕ್ಕಮಗಳೂರು ಉಪವಿಭಾಗಾಧಿಕಾರಿ ಮತ್ತು ಸ್ವಾಗತ ಸಮಿತಿ ಅಧ್ಯಕ್ಷ ಹೆಚ್.ಎಲ್. ನಾಗರಾಜು, ರಾಜ್ಯಾಧ್ಯಕ್ಷ ಚ.ನಾ.ಅಶೋಕ್, ಮಂಡ್ಯ ಜಿಲ್ಲಾಧ್ಯಕ್ಷ ಮಂಜುನಾಥ್, ಸುರೇಶ್ ಗುರೂಜಿ, ಪಾಂಶುಪಾಲ ಚಂದ್ರಶೇಖರ್ ಸೇರಿದಂತೆ ಹಲವರ ಸಮ್ಮುಖದಲ್ಲಿ ಮಕ್ಕಳ ಆಯ್ಕೆ ಪ್ರಕ್ರಿಯೆ ನಡೆದಿದೆ.

Last Updated : Nov 11, 2019, 10:58 AM IST

ABOUT THE AUTHOR

...view details