ಚನ್ನರಾಯಪಟ್ಟಣ:ಚೆಸ್ಕಾಂ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅವಘಡಕ್ಕೆ ನಿಖರ ಮಾಹಿತಿ ತಿಳಿದುಬಂದಿಲ್ಲ ಎಂದು ಹಾಸನ ವೃತ್ತದ ಅಧೀಕ್ಷಕ ಎಂಜಿನಿಯರ್ ಬಿ.ಎಸ್. ಸುಚೇತನ್ ತಿಳಿಸಿದ್ದಾರೆ.
ಚೆಸ್ಕಾಂ ಗೋಡೌನ್ನಲ್ಲಿ ಅಗ್ನಿ ಅವಘಡ....4.30 ಕೋಟಿ ರೂ. ನಷ್ಟ - Chess com Goden
ಚೆಸ್ಕಾಂ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆ, ಅಗ್ನಿ ಅವಘಡಕ್ಕೆ ಕಾರಣ ಸರಿಯಾಗಿ ತಿಳಿದು ಬಂದಿಲ್ಲ. ಆದ್ರೆ, 4.30ರೂ ಕೋಟಿ ನಷ್ಟವಾಗಿದೆ ಎಂದು ಹಾಸನ ವೃತ್ತದ ಅಧೀಕ್ಷಕ ಬಿ.ಎಸ್. ಸುಚೇತನ್ ತಿಳಿಸಿದರು.
![ಚೆಸ್ಕಾಂ ಗೋಡೌನ್ನಲ್ಲಿ ಅಗ್ನಿ ಅವಘಡ....4.30 ಕೋಟಿ ರೂ. ನಷ್ಟ Fire in Chess com Goden](https://etvbharatimages.akamaized.net/etvbharat/prod-images/768-512-7363451-thumbnail-3x2-hasana.jpg)
ಚೆಸ್ಕಾಂ ಗೋಡನ್ನಲ್ಲಿ ಅಗ್ನಿ ಅವಘಡ....4.30 ಕೋಟಿ ರೂ. ನಷ್ಟ
ಚೆಸ್ಕಾಂ ಗೋಡೌನ್ನಲ್ಲಿ ಬೆಂಕಿ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಸುಚೇತನ್, ಈ ಅಗ್ನಿ ಅವಘಡಕ್ಕೆ ಕಾರಣ ಸರಿಯಾಗಿ ತಿಳಿದು ಬಂದಿಲ್ಲ. ಆದ್ರೆ 4.30ರೂ ಕೋಟಿ ನಷ್ಟವಾಗಿದೆ ಎಂದು ತಿಳಿಸಿದರು.
ಬಿ.ಎಸ್. ಸುಚೇತನ್
ರೈತರು ಸಂಯಮದಿಂದ ವರ್ತಿಸಬೇಕು. ನಾವು ನಮ್ಮ ಅಕ್ಕಪಕ್ಕದ ಜಿಲ್ಲೆ, ತಾಲೂಕಿನ ಜೆಸ್ಕಾಂಗಳಲ್ಲಿ ಸಹಾಯವನ್ನು ಕೇಳಿದ್ದೇವೆ. ಹಾಗಾಗಿ ರೈತರು ಸ್ವಲ್ಪ ದಿನಗಳ ಕಾಲ ಸಂಯಮದಿಂದ ಇರಬೇಕು ಎಂದು ತಿಳಿಸಿದರು. ಈಗಾಗಲೇ ಕೊರೊನಾದಿಂದಾಗಿ ರೈತ ಬೇಸತ್ತಿದ್ದಾನೆ, ಇದೀಗ ಕರೆಂಟ್ ಇಲ್ಲದೇ ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿದೆ.