ಹಾಸನ: ಆಕಸ್ಮಿಕವಾಗಿ ಬೆಂಕಿ ತಗುಲಿದ ಹಿನ್ನೆಲೆ ಮನೆಯೊಂದು ಸುಟ್ಟು ಹೋಗಿರುವ ಘಟನೆ ನಡೆದಿದೆ.
ಆಕಸ್ಮಿಕ ಬೆಂಕಿ: ಸುಟ್ಟು ಹೋದ ಗೃಹಪಯೋಗಿ ವಸ್ತುಗಳು - undefined
ಆಕಸ್ಮಿಕ ಬೆಂಕಿಯಿಂದ ಮನೆಯಲ್ಲಿದ್ದ ವಸ್ತುಗಳು ಸುಟ್ಟು ಹೋಗಿವೆ.
![ಆಕಸ್ಮಿಕ ಬೆಂಕಿ: ಸುಟ್ಟು ಹೋದ ಗೃಹಪಯೋಗಿ ವಸ್ತುಗಳು](https://etvbharatimages.akamaized.net/etvbharat/images/768-512-2771896-544-33444b33-791b-41c2-9a7b-2ae5292d7829.jpg)
ಬೆಂಕಿ
ಪಟ್ಟಣದ ಗೋವಿಂದೇಗೌಡ ಎಂಬುವರ ವಠಾರದ ಮನೆ ಭಾಗಶಃ ಸುಟ್ಟು ಹೋಗಿದ್ದು, ಮನೆಯಲ್ಲಿದ್ದ ಗೃಹಪಯೋಗಿ ವಸ್ತುಗಳು ಬೆಂಕಿಗೆ ಸುಟ್ಟು ಕರಕಲಾಗಿವೆ. ಮುನೇಗೌಡರ ಹಳೆಯ ಮನೆ ಇದಾಗಿದ್ದು, ಈ ಮನೆಯನ್ನು ಬಾಡಿಗೆಗೆ ನೀಡಿದ್ದರು. ರಾತ್ರಿ ಅವರು ಊಟಕ್ಕೆಂದು ದರ್ಗಾಕ್ಕೆ ಹೋದ ಸಂದರ್ಭದಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ಮೌಲ್ಯದ ವಸ್ತುಗಳು ಬೆಂಕಿಗಾಹುತಿಯಾಗಿವೆ.
ಈ ಸಂಬಂಧ ಜಾವಗಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.