ಹಾಸನ :ದುಡ್ಡು ಕೊಟ್ಟು ಬಿಜೆಪಿಗೆ ಬರುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿ ಅರಸೀಕೆರೆ ನಗರಸಭೆ ಸದಸ್ಯರೊಬ್ಬರು ಇಬ್ಬರು ಜೆಡಿಎಸ್ ಸದಸ್ಯರ ವಿರುದ್ಧವೇ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್ಐಆರ್ ದಾಖಲಾಗಿದೆ.
ಸಿಕಂದರ್ ಹಾಗೂ ಹರ್ಷವರ್ಧನ್ ಎಂಬ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜೆಡಿಎಸ್ ಪಕ್ಷದ ನಗರಸಭೆ ಸದಸ್ಯರಾಗಿರುವ ಇವರು ಆಪರೇಷನ್ ಕಮಲಕ್ಕೆ ಒಳಗಾಗಿ ಬಿಜೆಪಿ ಕಡೆ ವಾಲಿದ್ದಾರೆ ಎಂದು ಹೇಳಲಾಗ್ತಿದೆ. ಹಾಗಾಗಿ, ಇನ್ನೋರ್ವ ಜೆಡಿಎಸ್ ಸದಸ್ಯೆ ಕಲೈ ಆರಸಿ ಎಂಬುವರಿಗೆ ಹಣದ ಆಮಿಷ ತೋರಿಸಿ ಬಿಜೆಪಿಗೆ ಬರುವಂತೆ ಒತ್ತಾಯ ಮಾಡುತ್ತಿದ್ದಾರೆ ಎಂದು ದೂರು ನೀಡಲಾಗಿದೆ.