ಅರಕಲಗೂಡು: ಕೊರೊನಾ ಸೋಂಕು ತಡೆಗೆ ಸಾರ್ವಜನಿಕರು ಎಚ್ಚೆತ್ತುಕೊಳ್ಳಬೇಕು. ಮುಖ್ಯವಾಗಿ ಕೊರೊನಾ ವಾರಿಯರ್ಸ್ ಮತ್ತಷ್ಟು ಜಾಗೃತರಾಗಬೇಕು ಎಂದು ಮಾಜಿ ಸಚಿವ ಎ. ಮಂಜು ಮನವಿ ಮಾಡಿದರು.
ಮದ್ದಿಲ್ಲದ ಮುನ್ನೆಚ್ಚರಿಕಾ ಕ್ರಮವೇ ರಾಮಬಾಣ.. ಮಾಜಿ ಸಚಿವ ಎ. ಮಂಜು - felicity to corona warriors
ಕೋವಿಡ್-19 ಯೋಧರಾಗಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್, ಹೊರಗಿನಿಂದ ಬರುವವರ ಬಗ್ಗೆಯೂ ಸದಾ ನಿಗಾ ಇಡಬೇಕು, ಸಾರ್ವಜನಿಕರೂ ಹೆಚ್ಚು ಸಹಕಾರ ನೀಡಬೇಕು..
ಪಟ್ಟಣದ ಡಿ ಕೆ ಕನ್ವೆನ್ಷನ್ ಹಾಲ್ನಲ್ಲಿ ಮಂಜು ಅಭಿಮಾನಿ ಬಳಗದ ವತಿಯಿಂದ ಅರಕಲಗೂಡು, ಕಸಬಾ ಹೋಬಳಿಯ ಕೋವಿಡ್ ವಾರಿಯರ್ಸ್ಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಮುದಾಯಕ್ಕೆ ಕೊರೊನಾ ಸೋಂಕು ಹರಡುತ್ತಿರುವುದು ಕಳವಳಕಾರಿ ಸಂಗತಿ. ಕೊರೊನಾ ವಾರಿಯರ್ಸ್ ಹೆಚ್ಚು ಜಾಗೃತರಾಗಿರಬೇಕು. ಎಲ್ಲಕ್ಕಿಂತ ಮುಖ್ಯ ಮದ್ದಿಲ್ಲದ ಕೋವಿಡ್ಗೆ ಅಂತರ ಕಾಪಾಡಿಕೊಂಡು ಪರಿಹಾರ ಮಾರ್ಗಗಳನ್ನು ಪಾಲಿಸಬೇಕು ಎಂದು ವಿನಂತಿಸಿದರು.
ಕೋವಿಡ್-19 ಯೋಧರಾಗಿ ಜೀವದ ಹಂಗು ತೊರೆದು ಕೆಲಸ ನಿರ್ವಹಿಸುತ್ತಿರುವ ಕೊರೊನಾ ವಾರಿಯರ್ಸ್, ಹೊರಗಿನಿಂದ ಬರುವವರ ಬಗ್ಗೆಯೂ ಸದಾ ನಿಗಾ ಇಡಬೇಕು, ಸಾರ್ವಜನಿಕರೂ ಹೆಚ್ಚು ಸಹಕಾರ ನೀಡಬೇಕು. ಇದರಿಂದ ಸೋಂಕು ತಕ್ಕಮಟ್ಟಿಗೆ ಹಳ್ಳಿಗಳಿಗೆ ವ್ಯಾಪಿಸುವುದನ್ನು ತಡೆಯಲು ನೆರವಾಗಲಿದೆ. ಕುಟುಂಬದವರ ರಕ್ಷಣೆ ಲೆಕ್ಕಿಸದೆ ಕೋವಿಡ್ ವಿರುದ್ಧ ಹೋರಾಡುತ್ತಿರುವ ವಾರಿಯರ್ಸ್ಗೆ ಸನ್ಮಾನಿಸುತ್ತಿರುವುದು ಅತೀವ ಸಂತಸ ತಂದಿದೆ ಎಂದರು.