ಕರ್ನಾಟಕ

karnataka

ETV Bharat / state

ಅಡಿಕೆ ಗಿಡ ಕತ್ತರಿಸಿದ ಕೋಪ: ಜ್ಯೋತಿಷಿ ಮಾತು ಕೇಳಿ ಯುವಕನ ಕೈ-ಕಾಲು ಕತ್ತರಿಸಿದನೇ ಚಿಕ್ಕಪ್ಪ? - ತೋಟದ ಮಾಲೀಕ ಜಗದೀಶ್

ಅಡಿಕೆ ಗಿಡಗಳನ್ನು ಕಡಿದು ಹಾಕಿದ್ದಕ್ಕೆ ವ್ಯಕ್ತಿಯೊಬ್ಬನ ಕೈ, ಕಾಲು ಕಟ್ ಮಾಡಿರುವ ಅನುಮಾನಾಸ್ಪದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

Fatal assault on a man in Hassan  Man leg cut in Hassan  Hassan crime news  ಅಡಿಕೆ ಗಿಡಗಳ ಕಟ್  ಚಿಗುರೊಡೆಯುತ್ತಿದ್ದ ಅಡಿಕೆ ಮರ  ಸಹೋದರನ ಮಗನ ಕೈ ಕಾಲು ಕತ್ತರಿಸಿದ ಘಟನೆ  ತೋಟದ ಮಾಲೀಕ ಜಗದೀಶ್  ಜೋತಿಷ್ಯ ಶಾಸ್ತ್ರವನ್ನು ನಂಬಿದ ಜಗದೀಶ್
ಜೋತಿಷ್ಯ ಮಾತು ಕೇಳಿ ಮಗನ ಕೈ-ಕಾಲು ಕತ್ತಿರಿಸಿದ ಚಿಕ್ಕಪ್ಪ

By

Published : May 15, 2023, 1:26 PM IST

ಹಾಸನ : ಅಡಿಕೆ ಗಿಡಗಳನ್ನು ಕತ್ತರಿಸಿದ್ದಾನೆ ಎಂದು ಅನುಮಾನ ವ್ಯಕ್ತಪಡಿಸಿ, ತನ್ನ ಸಹೋದರನ ಮಗನ ಕೈ-ಕಾಲುಗಳನ್ನು ಕತ್ತರಿಸಿದ ಶಂಕಾಸ್ಪದ ಘಟನೆ ಹಾಸನ ತಾಲೂಕಿನ ದುದ್ದ ಸಮೀಪದ ಮಾಕನಹಳ್ಳಿ ಗ್ರಾಮದಲ್ಲಿ ನಡೆದಿದೆ. ವಿಧಾನಸಭೆಗೆ ಮತದಾನ ನಡೆದ ರಾತ್ರಿ, ಮೇ 10ರಂದು ಅಡಿಕೆ ಮರಗಳನ್ನು ಕಡಿದು ಹಾಕಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಜಗಣ್ಣ ಎಂಬುವರಿಗೆ ಸೇರಿದ 50 ರಿಂದ 60 ಗಿಡಗಳನ್ನು ಕಿಡಿಗೇಡಿಗಳು ರಾತ್ರೋರಾತ್ರಿ ಕಡಿದು ಹಾಕಿದ್ದಾರೆ.

ಮಾಲೀಕ ಜಗದೀಶ್ ಮೇ 11ರಂದು ಎಂದಿನಂತೆ ತೋಟಕ್ಕೆ ಹೋದಾಗ ಘಟನೆ ಗೊತ್ತಾಗಿದೆ. ಒಂದೆರಡು ವರ್ಷಗಳಲ್ಲಿ ಫಸಲು ಕೊಡಬೇಕಿಗಿದ್ದ ಅಡಿಕೆ ಗಿಡಗಳನ್ನು ನಾಶಪಡಿಸಿದ್ದರಿಂದ ಜಗಣ್ಣ ಕಣ್ಣೀರು ಹಾಕಿದ್ದರು. ಇರುವ ಅಲ್ಪಸ್ವಲ್ಪ ಜಮೀನಿನಲ್ಲಿ ಕೃಷಿ ಚಟುವಟಿಕೆ ಮಾಡಿಕೊಂಡು ಜೀವನ ನಡೆಸುತ್ತಿದ್ದೆವು. ರಾಜಕೀಯ ಕುತಂತ್ರದಿಂದ ಇಂಥ ಕೃತ್ಯ ನಡೆಸಿದ್ದಾರೆ ಎಂದು ಆರೋಪಿಸಿದ್ದರು. ಎಷ್ಟೇ ದ್ವೇಷವಿದ್ದರೂ ಇಂತಹ ಹೀನಾಯ ಕೃತ್ಯಕ್ಕೆ ಯಾರೂ ಕೈ ಹಾಕಬಾರದು. ಸರ್ಕಾರ ಮತ್ತು ಪೊಲೀಸ್ ಇಲಾಖೆ ಕಿಡಿಗೇಡಿಗಳ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು. ಪರಿಹಾರವನ್ನೂ ನೀಡಬೇಕೆಂದು ಗ್ರಾಮಸ್ಥರು ಮನವಿ ಮಾಡಿದ್ದರು.

ಸ್ಥಳಕ್ಕೆ ಆಗಮಿಸಿದ ದುದ್ದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದರು. ತನಿಖೆ ನಡೆಯುತ್ತಿರುವ ಸಂದರ್ಭದಲ್ಲಿಯೇ ಜಗಣ್ಣ ಜ್ಯೋತಿಷಿಯೊಬ್ಬರ ಬಳಿ ತೆರಳಿ ಕೃತ್ಯ ನಡೆಸಿದ್ದು ಯಾರು ಎಂದು ಕೇಳಿದ್ದಾರೆ. ಜ್ಯೋತಿಷಿ, ನಿಮ್ಮ ದಾಯಾದಿಗಳೇ ಕೃತ್ಯವೆಸಗಿದ್ದಾರೆ ಎಂದು ಹೇಳಿದ್ದಾರೆ ಎಂಬ ಮಾಹಿತಿ ವಿಶ್ವಸನೀಯ ಮೂಲಗಳಿಂದ ದೊರೆತಿದೆ.

ಇದನ್ನು ನಂಬಿದ ಜಗದೀಶ್ ಮೇ 14ರ ಸಂಜೆ ಅಭಿ ಎಂಬಾತನೊಂದಿಗೆ ಸೇರಿ ಜಮೀನಿನ ಮನೆಗೆ ತೆರಳುತ್ತಿದ್ದ ಸಹೋದರನ ಮಗ ಚೇತನ್​ ಕುಮಾರ್​ನನ್ನು ಅಡ್ಡಗಟ್ಟಿದ್ದಾರೆ. ಆತನ ಕೈ ಮತ್ತು ಕಾಲನ್ನು ಮಾರಕಾಸ್ತ್ರಗಳಿಂದ ಕಡಿದು ಸ್ಥಳದಿಂದ ಕಾಲ್ಕಿತ್ತಿದ್ದಾರೆ. ಸ್ಥಳೀಯರು ಗಮನಿಸಿ ಕೂಡಲೇ ಚೇತನ್​ನನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಂಭೀರವಾಗಿ ಗಾಯಗೊಂಡ ಪರಿಸ್ಥಿತಿಯಲ್ಲೇ ಚೇತನ್​ ವಿಡಿಯೋದಲ್ಲಿ ಮಾತನಾಡಿ, "ನನ್ನ ಮೇಲೆ ಜಗದೀಶ್​ ಮತ್ತು ಅಭಿ ಎಂಬುವರು ಹಲ್ಲೆ ಮಾಡಿದ್ದಾರೆ" ಎಂದು ಹೇಳಿದ್ದಾರೆ.

ಚೇತನ್ ಕುಮಾರ್‌ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಹಾಸನದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಾಣಾಪಾಯದಿಂದ ಪಾರಾಗಿದ್ದಾರೆ. ದುದ್ಧ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆರೋಪಿಗಳಾದ ಜಗದೀಶ್ ಮತ್ತು ಅಭಿ ತಲೆಮರೆಸಿಕೊಂಡಿದ್ದಾರೆ.

ಇದನ್ನೂ ಓದಿ:ವಿಮಾನ ಪ್ರಯಾಣದ ವೇಳೆ ಮಹಿಳಾ ಸಿಬ್ಬಂದಿಗೆ ಲೈಂಗಿಕ ಕಿರುಕುಳ: ಪ್ರಯಾಣಿಕನ ಬಂಧನ

ABOUT THE AUTHOR

...view details