ಕರ್ನಾಟಕ

karnataka

ETV Bharat / state

ಗಣರಾಜ್ಯೋತ್ಸವ ದಿನ ಪ್ರಧಾನಿ, ಸಿಎಂ ಭಾಷಣದ ನಂತರ ಬೆಂಗಳೂರಿನಲ್ಲಿ ಉಗ್ರ ಹೋರಾಟ: ಕೋಡಿಹಳ್ಳಿ - ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್

​ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಷಣ ಮಾಡಲಿರುವ ಪ್ರಧಾನಿ ಮತ್ತು ಸಿಎಂ, ಕಾಯ್ದೆ ವಾಪಸ್ ಪಡೆಯುವ ವಿಚಾರ ಪ್ರಸ್ತಾಪಿಸದೆ ಇದ್ರೆ 18 ಕಿ.ಮೀ. ರೈತರ ಬೃಹತ್ ರ್ಯಾಲಿ ನೈಸ್ ರಸ್ತೆಯಿಂದ ಪ್ರಾರಂಭವಾಗಲಿದೆ ಎಂದು ರಾಜ್ಯ ರೈತ ಸಂಘದ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್​ ತಿಳಿಸಿದರು.

farmers-tractor-rally-will-held-january-26-after-prime-minister-speech
ರೈತರ ಬೃಹತ್ ರ್ಯಾಲಿ

By

Published : Jan 24, 2021, 10:18 PM IST

ಹಾಸನ: ರೈತ ವಿರೋಧಿ ಕಾಯ್ದೆ ವಾಪಸ್ ಪಡೆಯದಿದ್ದರೆ ಜ. 26ರಂದು ಪ್ರಧಾನಮಂತ್ರಿ ಮತ್ತು ಮುಖ್ಯಮಂತ್ರಿ ಭಾಷಣದ ನಂತರ ಬೆಂಗಳೂರಿನಲ್ಲಿ ರೈತರ ಬೃಹತ್ ರ್ಯಾಲಿ ನಡೆಯಲಿದೆ ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯಾಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್ ಎಚ್ಚರಿಸಿದರು.

​ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೆಹಲಿಯಲ್ಲಿ ರೈತ ವಿರೋಧಿ ಕಾನೂನುಗಳನ್ನು ಖಂಡಿಸಿ ರೈತರು ಸತ್ಯಾಗ್ರಹ ಆರಂಭಿಸಿ ಈಗಾಗಲೇ ಎರಡು ತಿಂಗಳು ಕಳೆದಿದೆ. ಮೈ ನಡುಗುವ ಚಳಿಯಲ್ಲಿ ರೈತರು ಧರಣಿ ಮಾಡುತ್ತಿದ್ದಾರೆ. ಆರಂಭದಿಂದಲೂ ರೈತರ ಮನವೊಲಿಸುವ ಕೆಲಸ ಮಾಡಲಾಗುತ್ತಿದೆ. 2 ವರ್ಷ ತಾತ್ಕಾಲಿಕ ತಡೆ ಹಿಡಿಯುವುದಾಗಿ ಹೇಳಿ ಪ್ರತಿಭಟನೆ ವಾಪಸ್ ಪಡೆಯಿರಿ ಎಂದು ಕೇಂದ್ರ ಹೇಳಿದೆ.

ಗಣರಾಜ್ಯೋತ್ಸವ ದಿನ ಪ್ರಧಾನಿ, ಸಿಎಂ ಭಾಷಣ ನಂತರ ಬೆಂಗಳೂರಿನಲ್ಲಿ ಉಗ್ರ ಹೋರಾಟ

ಆದ್ರೆ ಪೂರ್ಣ ಪ್ರಮಾಣದಲ್ಲಿ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯಬೇಕು. ಕಾನೂನು ಮೂಲಕ ರೈತರ ಕೈ-ಕಾಲು ಕಟ್ಟುವ ಕೆಲಸ ನಡೆಯುತ್ತಿದೆ. ಕಾಯ್ದೆ ಜಾರಿ ವಾಪಸ್ ಪಡೆಯದಿದ್ದರೆ ನಾವೂ ಹೋರಾಟ ಹಿಂಪಡೆಯುವುದಿಲ್ಲ ಎಂದು ಸ್ಪಷ್ಟಪಡಿಸಿದರು.

ಓದಿ-ಗಣರಾಜ್ಯೋತ್ಸವದಂದು ಟ್ರ್ಯಾಕ್ಟರ್ ರ‍್ಯಾಲಿಗೆ ಅನುಮತಿ ದೊರಕಿದೆ: ಯೋಗೇಂದ್ರ ಯಾದವ್

ಪ್ರಧಾನಿ, ಮುಖ್ಯಮಂತ್ರಿ ಭಾಷಣ ನಂತರ ಪ್ರತಿಭಟನೆ

​ಜ. 26ರಂದು ನಡೆಯಲಿರುವ ಗಣರಾಜ್ಯೋತ್ಸವದಲ್ಲಿ ಭಾಷಣ ಮಾಡಲಿರುವ ಪ್ರಧಾನಿ ಮತ್ತು ಸಿಎಂ, ಕಾಯ್ದೆ ವಾಪಸ್ ಪಡೆಯುವ ವಿಚಾರ ಪ್ರಸ್ತಾಪಿಸದೆ ಇದ್ರೆ 18 ಕಿ.ಮೀ. ರೈತರ ಬೃಹತ್ ರ್ಯಾಲಿ ನೈಸ್ ರಸ್ತೆಯಿಂದ ಪ್ರಾರಂಭವಾಗಲಿದೆ ಎಂದು ತಿಳಿಸಿದರು.

ದೇಶದ ಸರ್ಕಾರಿ ಉದ್ದಿಮೆಗಳನ್ನು ಖಾಸಗಿಯವರಿಗೆ ವರ್ಗಾಯಿಸುವುದು ಬಿಜೆಪಿ ಅಜೆಂಡಾ. ಈ ದೇಶವನ್ನೇ ಅದಾನಿ, ಅಂಬಾನಿಗೆ ಮಾರುವ ಮೂಲಕ ಈಸ್ಟ್ ಇಂಡಿಯಾ ಕಂಪನಿ ಮರುಸ್ಥಾಪನೆ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

ಸರ್ವಾಧಿಕಾರಿ ಧೋರಣೆ ಮೂಲಕ ಕೇಂದ್ರ ತಪ್ಪು ಹೆಜ್ಜೆ ಇಡುತ್ತಿದೆ. ಇದರ ವಿರುದ್ಧ ದೊಡ್ಡ ಹೋರಾಟ ನಡೆಯಬೇಕಿದೆ. ರ್ಯಾಲಿ ವೇಳೆ ಯಾವುದೇ ರಾಷ್ಟ್ರ ವಿರೋಧಿ ಚಟುವಟಿಕೆ ಮತ್ತು ಯಾವ ಕಚೇರಿ ಮೇಲೆ ದಾಳಿ ಮಾಡುವುದಿಲ್ಲ. ಶಾಂತಿಯುತವಾಗಿ ನಮ್ಮ ಹೋರಾಟ ನಡೆಯಲಿದೆ. ಸರ್ಕಾರ ಯಾವ ಕಾನೂನು ಕ್ರಮ ಕೈಗೊಳ್ಳಲಿದೆ ಕೈಗೊಳ್ಳಲಿ ಎಂದು ಹೇಳಿದರು.

ABOUT THE AUTHOR

...view details