ಅಗತ್ಯ ವಸ್ತುಗಳನ್ನು ಕೊಳ್ಳಲಾಗದೆ ರೈತರ ತೊಳಲಾಟ: ಬೆಳೆ ಮಾರಾಟ ಮಾಡುವಂತೆ ಸರ್ಕಾರಕ್ಕೆ ಮನವಿ - corona effect
ಇದ್ದವರು ಏನೋ ಮಾಡ್ತಾರೆ, ಇಲ್ಲದವರ ಕಥೆ ಏನು ಸ್ವಾಮಿ? ಈ ಕೊರೊನಾ ಲಾಕ್‌ಡೌನ್‌ನಿಂದಾಗಿ ಅಗತ್ಯ ವಸ್ತುಗಳನ್ನೂ ನಮಗೆ ಕೊಳ್ಳಲಾಗುತ್ತಿಲ್ಲ ಎಂದು ರೈತರು ನೋವು ತೋಡಿಕೊಳ್ತಿದ್ದಾರೆ.
ಹಾಸನ: ಮನೆಯಲ್ಲಿ ನಾವೇ ಬೆಳೆದ ಅಕ್ಕಿ, ರಾಗಿ ಇದೆ. ಆದರೆ ಇನ್ನುಳಿದ ವಸ್ತು ಕೊಳ್ಳಲು ನಮ್ಮ ಬಳಿ ಹಣ ಇಲ್ಲ. ಕೂಡಲೇ ನಮ್ಮಲ್ಲಿರುವ ಕೊಬ್ಬರಿ ಮಾರಲು ಅವಕಾಶ ಕಲ್ಪಿಸಿ ಕೊಡಿ ಎಂದು ತೆಂಗು ಬೆಳೆದ ರೈತರೊಬ್ಬರು ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಚನ್ನರಾಯಪಟ್ಟಣ ತಾಲ್ಲೂಕಿನ ದಿಂಡಗೂರು ಗ್ರಾಮದ ರೈತ ತಮ್ಮ ತೋಟದಲ್ಲಿ ಬೆಳೆದಿರುವ ಬೆಳೆಗಳನ್ನು ವಿಡಿಯೋ ಮಾಡಿ ಸರ್ಕಾರಕ್ಕೆ ತಮ್ಮ ಕಷ್ಟ ಹೇಳಿಕೊಂಡಿದ್ದಾರೆ. ನಮ್ಮ ತೋಟದಲ್ಲಿ ಬಾಳೆ, ಕುಂಬಳ, ತೆಂಗು ಸೇರಿದಂತೆ ಇನ್ನಿತರ ಬೆಳೆಗಳಿವೆ. ಆದರೆ ಇದನ್ನು ಮಾರ್ಕೆಟ್‌ಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡೋದೇ ಕಷ್ಟವಾಗಿದೆ. ಮನೆಯಲ್ಲಿ ಮಾರಲು ಸಿದ್ಧವಾಗಿರುವ ಕೊಬ್ಬರಿ ಇದೆ. ಆದರೆ ಏಪ್ರಿಲ್ವರೆಗೆ ಕೊಬ್ಬರಿ ಕೊಳ್ಳಲು ಸಾಧ್ಯವಿಲ್ಲ ಅಂತಿದ್ದಾರೆ. ಇದ್ರಿಂದ ನಮ್ಮ ಬಳಿ ಅಗತ್ಯ ವಸ್ತು ಕೊಳ್ಳಲು, ಮನೆಯಲ್ಲಿ ಯಾರಿಗಾದ್ರೂ ಆರೋಗ್ಯ ಸಮಸ್ಯೆ ಆದ್ರೆ ಚಿಕಿತ್ಸೆ ಕೊಡಿಸಲು ಹಣ ಇಲ್ಲದಂತಾಗಿದೆ ಎನ್ನುತ್ತಾರೆ ಈ ರೈತ.