ಕರ್ನಾಟಕ

karnataka

By

Published : Apr 20, 2020, 6:05 PM IST

ETV Bharat / state

ಸಂಕಷ್ಟದಲ್ಲಿ ರೈತ... ತಲೆಕೆಡಿಸಿಕೊಳ್ಳದ ಶಾಸಕ, ಸಂಸದ: ಅರಕಲಗೂಡು ರೈತರ ಆರೋಪ

ಅರಕಲಗೂಡು ತಾಲೂಕಿನ ಗೊಬ್ಬಳಿ ಕಾವಲು ಹಾಗೂ ಹೊನಗನಹಳ್ಳಿ ಗ್ರಾಮದಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕ ಸರಿಪಡಿಸಲು ಒತ್ತಾಯಿಸಿ ರೈತರು ಇಂದು ರಾಮನಾಥಪುರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ್ದಾರೆ.

farmers failure from the face the crop fall
ರೈತ ಸಂಘದ ಮುಖಂಡನಿಂದ ಆರೋಪ

ಅರಕಲಗೂಡು: ರೈತರು ಬೆಳೆದ ಬೆಳೆಗಳನ್ನು ಕಳೆದುಕೊಂಡು‌ ಸಂಕಷ್ಟಕ್ಕೆ ಸಿಲುಕಿದ್ದರೂ ಕ್ಷೇತ್ರದ ಶಾಸಕ‌ ಎ.ಟಿ. ರಾಮಸ್ವಾಮಿ ಮತ್ತು ಸಂಸದ‌ ಪ್ರಜ್ವಲ್ ರೇವಣ್ಣ ತಲೆಕೆಡಿಸಿಕೊಳ್ಳದೇ ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ರೈತ ಸಂಘದ ಮುಖಂಡ ಜಗದೀಶ್ ಆರೋಪಿಸಿದ್ದಾರೆ.

ಗೊಬ್ಬಳಿ ಕಾವಲು ಹಾಗೂ ಹೊನಗನಹಳ್ಳಿ ಗ್ರಾಮದಲ್ಲಿ ಕೆಟ್ಟು ಹೋಗಿರುವ ವಿದ್ಯುತ್ ಪರಿವರ್ತಕ ಸರಿಪಡಿಸಲು ಒತ್ತಾಯಿಸಿ ರೈತರು ಇಂದು ರಾಮನಾಥಪುರ ಸೆಸ್ಕ್ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟಿಸಿದ ಸಂದರ್ಭದಲ್ಲಿ ಅವರು ಆಕ್ರೋಶ‌ ವ್ಯಕ್ತಪಡಿಸಿದರು.

ರೈತ ಸಂಘದ ಮುಖಂಡನಿಂದ ಆರೋಪ

ಕಳೆದ‌‌ ಆರು‌‌ ತಿಂಗಳಿಂದ ಟಿಸಿ ಕೆಟ್ಟಿದ್ದು ಸರಿಪಡಿಸಲು ಮನವಿ ಮಾಡಿದರೂ ಸೆಸ್ಕ್​​ನವರು ತಲೆಕೆಡಿಸಿಕೊಳ್ಳುತ್ತಿಲ್ಲ. ಪರಿಣಾಮವಾಗಿ ಬೆಳೆದ ಬೆಳೆಗಳು ಒಣಗಿ ನಾಶವಾಗುತ್ತಿದೆ. ಅಲ್ಲದೇ ನಿತ್ಯವೂ ಸೆಸ್ಕ್ ಕಚೇರಿಗೆ ಅಲೆಯುವುದೇ ಆಗಿದೆ, ಚೆಕ್​​ಪೋಸ್ಟ್​​​ನಲ್ಲಿ ಪೊಲೀಸರು ಒಳಬಿಡುತ್ತಿಲ್ಲ. ಇಂದು ಕಚೇರಿ ಒಳಗೂ ಬಿಡದೇ ಬೀಗ ಹಾಕಲಾಗಿದ್ದು ನಮ್ಮ ಕಷ್ಟ ಆಲಿಸುವವರೇ ಇಲ್ಲವಾಗಿದ್ದಾರೆಂದು ರೈತರು ತಮ್ಮ ಅಳಲನ್ನ ತೋಡಿಕೊಂಡಿದ್ದಾರೆ.

ರೈತರು ಸಾಲ ಮಾಡಿ ಬೆಳೆದ ಬೆಳೆಗಳು ಒಣಗಿ ಹಾಳಾಗುತ್ತಿವೆ, ಈಗ ಲಾಕ್​ಡೌನ್​​​ನಿಂದಾಗಿ ಅಲ್ಪಸ್ವಲ್ಪ ಬೆಳೆದ ಬೆಳೆಗಳನ್ನು‌ ಸಾಗಿಸಲು ಆಗುತ್ತಿಲ್ಲ.‌ ಕ್ಷೇತ್ರದ ಶಾಸಕರು ಮತ್ತು ಸಂಸದರು ರೈತರ ಸಮಸ್ಯೆಗೆ‌ ಸ್ಪಂದಿಸದೆ ನಿರ್ಲಕ್ಷ್ಯ ವಹಿಸಿದ್ದಾರೆ. ರೈತರ ಬೆಳೆಗಳನ್ನು ಖರೀದಿಸಿ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸದಿದ್ದರೆ ಆತ್ಮಹತ್ಯೆ ಹಾದಿ ಹಿಡಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ABOUT THE AUTHOR

...view details