ಹಾಸನ(ಅರಸೀಕೆರೆ): ಅಚ್ಚೇ ದಿನ್ ಅಚ್ಚೇ ದಿನ್ ಅಂದ್ರಲ್ಲ ಮೋದಿಜಿ, ಬೆಲೆ ಏರಿಕೆ ಮಾಡಿ ರೈತರು ಬದುಕಿ ಅಂದ್ರೆ ಬದುಕಾಗುತ್ತಾ?, ಕೊಟ್ಟ ಮಾತಿಗೆ ನಡೆದುಕೊಳ್ಳದೇ ರೈತರಿಗೆ ಅನ್ಯಾಯ ಮಾಡಿದ್ದೀರಿ ಎಂದು ಸರ್ಕಾರದ ವಿರುದ್ಧ ಅರಸೀಕೆರೆ ಜೆಡಿಎಸ್ ಶಾಸಕ ಕೆಎಂ ಶಿವಲಿಂಗೇಗೌಡ ಗುಡುಗಿದರು. ಅರಸೀಕೆರೆ ಎಪಿಎಂಸಿ ಅಂಗಳದಲ್ಲಿ ನಡೆದ ರೈತರ ಬೃಹತ್ ಪ್ರತಿಭಟನಾ ಸಮಾವೇಶದಲ್ಲಿ ಅವರು ಮಾತನಾಡಿದರು.
ರೈತರ ಸಂಕಷ್ಟ ಗೊತ್ತಿಲ್ಲದಿದ್ರೆ ದೇಶ ಯಾಕ್ರೀ ಆಳ್ತೀರಿ? ಶಾಸಕ ಶಿವಲಿಂಗೇಗೌಡ - ವಿದ್ಯುತ್ ಪರಿವರ್ತಕ
ಬೆಳೆಗಳಿಗೆ ಬೆಂಬಲ ಬೆಲೆ ಘೋಷಿಸುವಂತೆ ಆಗ್ರಹಿಸಿ ಅರಸೀಕೆರೆಯಲ್ಲಿ ರೈತರು ಬೃಹತ್ ಪ್ರತಿಭಟನಾ ಸಮಾವೇಶ ನಡೆಸಿದರು.
ಅರಸೀಕೆರೆಯಲ್ಲಿ ರೈತರ ಬೃಹತ್ ಪ್ರತಿಭಟನೆ
ಬಸವರಾಜ ಬೊಮ್ಮಾಯಿ ಅವರ ಅವರ ಬಗ್ಗೆ ನನಗೆ ಗೌರವ ಇದೆ. ಆ ಗೌರವವನ್ನು ಉಳಿಸಿಕೊಳ್ಳಬೇಕಾದರೆ ನೀವು ರೈತರ ಬೆಳೆಗಳಿಗೆ ಬೆಂಬಲ ಬೆಲೆ ಘೋಷಣೆ ಮಾಡಬೇಕು. ರೈತರಿಂದ ಕಣ್ಣೀರು ಸುರಿಸಿದ ಯಾವ ಸರ್ಕಾರವೂ ಉಳಿದಿಲ್ಲ. ರೈತರ ಶಾಪ ಒಳ್ಳೆಯದಲ್ಲ. ಹಾಗಾಗಿ ಆದೆಷ್ಟು ಬೇಗ ರೈತರ ಬೆಳೆಗಳಿಗೆ ಬೆಂಬಲ ಘೋಷಣೆ ಮಾಡಿ ಜೀವನ ಉಳಿಸಿ ಎಂದು ಆಗ್ರಹಿಸಿದರು.
ಇದನ್ನೂಓದಿ:ಬೆಳಗಾವಿ: 20 ವರ್ಷದಿಂದ ಜಮೀನಿನಲ್ಲಿ ಉಳುಮೆ ಮಾಡಲಾಗದೇ ರೈತರು ಕಂಗಾಲು