ಅರಕಲಗೂಡು : ಬೆಳೆ ಸಮೀಕ್ಷೆ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಯಾಗಿದ್ದು, ರೈತರು ಆ್ಯಪ್ ಮೂಲಕ ಬೆಳೆಯನ್ನು ನಮೂದಿಸುವುದು ಅತ್ಯಗತ್ಯವಾಗಿದೆ. ಕಳೆದ ಸಾಲಿನಲ್ಲಿ ನಿಯೋಜಿತ ಖಾಸಗಿಯವರಿಂದ ಇಲಾಖಾ ಸಿಬ್ಬಂದಿ ಬೆಳೆ ಸಮೀಕ್ಷೆ ಕೈಗೊಂಡಿದ್ದರು. ಆದರೆ 2020-21ನೇ ಸಾಲಿನಲ್ಲಿ ಸರ್ಕಾರವು ಬೆಳೆ ಸಮೀಕ್ಷೆ ಯೋಜನೆಗೆ ಬಹುದೊಡ್ಡ ಬದಲಾವಣೆ ತಂದು ಸ್ವತಃ ರೈತರೇ ತಮ್ಮ ಜಮೀನಿನ ಸರ್ವೇ ನಂಬರ್, ಹಿಸ್ಸಾ ಬೆಳೆದ ವಿವಿಧ ಬೆಳೆಗಳ ವಿವರ, ಕ್ಷೇತ್ರ, ಖುಷ್ಕಿ, ನೀರಾವರಿ ಮಾಹಿತಿಯನ್ನು ಛಾಯಾಚಿತ್ರ ಸಹಿತ ವಿವರಗಳನ್ನು ‘ಬೆಳೆ ಸಮೀಕ್ಷೆ ಆ್ಯಪ್’ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ. ಈ ಆ್ಯಪ್ ಅನ್ನು ಗೂಗಲ್ ಪ್ಲೇಸ್ಟೋರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬೇಕಿದೆ. ರೈತರು ಮೊಬೈಲ್ ಆ್ಯಪ್ ಮೂಲಕ ತಮ್ಮ ಬೆಳೆ ಮಾಹಿತಿ ನಮೂದಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ ಮಾಡಿದ್ದಾರೆ.
ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ ನಮೂದಿಸುವಂತೆ ಶಾಸಕ ಎ.ಟಿ.ರಾಮಸ್ವಾಮಿ ಮನವಿ - ಮೊಬೈಲ್ ಆ್ಯಪ್ ಮೂಲಕ ಬೆಳೆ ಮಾಹಿತಿ
2020-21ನೇ ಸಾಲಿನಲ್ಲಿ ಸರ್ಕಾರವು ಬೆಳೆ ಸಮೀಕ್ಷೆ ಯೋಜನೆಗೆ ಬಹುದೊಡ್ಡ ಬದಲಾವಣೆ ತಂದು ಸ್ವತಃ ರೈತರೇ ತಮ್ಮ ಜಮೀನಿನ ಸರ್ವೇ ನಂಬರ್, ಹಿಸ್ಸಾ ಬೆಳೆದ ವಿವಿಧ ಬೆಳೆಗಳ ವಿವರ, ಕ್ಷೇತ್ರ, ಖುಷ್ಕಿ, ನೀರಾವರಿ ಮಾಹಿತಿಯನ್ನು ಛಾಯಾಚಿತ್ರ ಸಹಿತ ವಿವರಗಳನ್ನು ‘ಬೆಳೆ ಸಮೀಕ್ಷೆ ಆ್ಯಪ್’ನಲ್ಲಿ ಅಪ್ಲೋಡ್ ಮಾಡಬೇಕಾಗಿದೆ.
ಶಾಸಕ ಎ.ಟಿ.ರಾಮಸ್ವಾಮಿ
ಆಯಾ ಗ್ರಾಮದಲ್ಲಿರುವ ವಿದ್ಯಾವಂತ ಯುವಕರನ್ನು ಖಾಸಗಿ ನಿವಾಸಿಗಳೆಂದು ಗುರುತಿಸಲಾಗಿದ್ದು ಅವರ ಸಹಾಯದಿಂದಲೂ ಬೆಳೆ ಸಮೀಕ್ಷೆ ಆ್ಯಪ್ ನಲ್ಲಿ ಬೆಳೆದ ಬೆಳೆಯನ್ನು ದಾಖಲಿಸಬಹುದಾಗಿದೆ. ಮುಂಗಾರು ಹಂಗಾಮಿನ ಬೆಳೆ ವಿವರಗಳನ್ನು ರೈತರೇ ಖುದ್ದು ಖಾಸಗಿ ನಿವಾಸಿಗಳ ಸಹಾಯ ಪಡೆದು ಆಗಸ್ಟ್ 24ನೇ ತಾರೀಖಿನವರೆಗೆ ನಮೂದಿಸಲು ಅವಕಾಶ ನೀಡಿದೆ.