ಅರಕಲಗೂಡು(ಹಾಸನ):ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ಲಾಕ್ಡೌನ್ ಪರಿಣಾಮ ಬೆಲೆ ಇಲ್ಲದೆ ಜಮೀನಿನಲ್ಲೇ ಗೆಣಸು ಬೆಳೆ ಕೊಳೆಯುತ್ತಿದ್ದು, ರೈತ ನಷ್ಟ ಅನುಭವಿಸುವಂತಾಗಿದೆ.
ಕಿತ್ತಿಟ್ಟ ಗೆಣಸಿನಿಂದ ಸಾಗಾಟದ ವೆಚ್ಚವೂ ಭರಿಸಲಾಗದೆ ರೈತ ಕಂಗಾಲು - Dummikoppalu of Arakalagudu taluk
ಅರಕಲಗೂಡು ತಾಲೂಕಿನ ದುಮ್ಮಿಕೊಪ್ಪಲು ಗ್ರಾಮದಲ್ಲಿ ರೈತೊನೊಬ್ಬ ತನ್ನ ಮೂರು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಗೆಣಸು ಟನ್ಗಟ್ಟಲೆ ಫಸಲು ಬಿಟ್ಟಿದೆ. ಆದರೆ ಲಾಕ್ಡೌನ್ ಪರಿಣಾಮ ಮಾರುಕಟ್ಟೆ ಇಲ್ಲದೆ ಒಂದು ಕೆಜಿ ಗೆಣಸು ಕೇವಲ 4 ರೂಪಾಯಿಗೆ ಮಾರಾಟವಾಗುತ್ತಿದೆ.
ಗ್ರಾಮದ ರೈತ ಕೃಷ್ಣೇಗೌಡ ಎಂಬುವರು ತನ್ನ ಮೂರು ಎಕರೆ ಜಮೀನಿನಲ್ಲಿ ಕಷ್ಟಪಟ್ಟು ಬೆಳೆದಿದ್ದ ಗೆಣಸು ಟನ್ಗಟ್ಟಲೆ ಫಸಲು ಬಿಟ್ಟಿದೆ. ಅದೇ ರೀತಿ ಒಂದೊಂದು ಗೆಣಸು ಕೂಡ ನಾಲ್ಕರಿಂದ ಐದು ಕೆಜಿಯಷ್ಟು ತೂಕವಿದೆ. ಆದರೆ ಲಾಕ್ಡೌನ್ ಪರಿಣಾಮ ಮಾರುಕಟ್ಟೆ ಇಲ್ಲದೆ ಒಂದು ಕೆಜಿ ಗೆಣಸು ಕೇವಲ 4 ರೂಪಾಯಿಗೆ ಮಾರಾಟವಾಗುತ್ತಿದೆ.
ಕಿತ್ತ ಗೆಣಸಿನಿಂದ ಕನಿಷ್ಠ ಪಕ್ಷ ಸಾಗಾಟದ ವೆಚ್ಚ ಭರಿಸಲೂ ಸಾಧ್ಯವಾಗುತ್ತಿಲ್ಲ. ಒಂದು ಎಕರೆ ಗೆಣಸು ಬೆಳೆಯಲು 30,000 ರೂಪಾಯಿ ಖರ್ಚಾಗಿತ್ತು. ಆದರೀಗ ಬೆಲೆ ಇಲ್ಲದೆ ಗೆಣಸು ಜಮೀನಿನಲ್ಲೇ ಕೊಳೆಯುತ್ತಿದೆ. ಸರ್ಕಾರ ನಮ್ಮ ನೆರವಿಗೆ ಧಾವಿಸಿ ಸೂಕ್ತ ಪರಿಹಾರ ನೀಡಬೇಕು ಎಂಬುದು ರೈತನ ಮನವಿಯಾಗಿದೆ.