ಕರ್ನಾಟಕ

karnataka

ETV Bharat / state

ಸಿಗದ ಬೆಂಬಲ ಬೆಲೆ: ಆತ್ಮಹತ್ಯೆಗೆ ಶರಣಾದ ಹಾಸನದ ರೈತ - Hassan news

ತನ್ನ ಜಮೀನಿನಲ್ಲಿ ಕ್ಯಾರೆಟ್, ಬೀಟ್ ರೂಟ್ ಮತ್ತು ಶುಂಠಿ ಬಿಳೆದಿದ್ದು, ಕೊರೊನಾ ಮಧ್ಯೆ ತಾನು ಬೆಳೆದಿದ್ದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತು ಸರ್ಕಾರದಿಂದ ಬೆಂಬಲ ಬೆಲೆ ಸಿಗದೆ ಮನನೊಂದು ಬೆಳೆಗೆ ಸಿಂಪಡಿಸಲು ಇಟ್ಟಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Farmer committed suicide in hassan
ಆತ್ಮಹತ್ಯೆಗೆ ಶರಣಾದ ರೈತ

By

Published : May 29, 2020, 12:52 PM IST

ಹಾಸನ: ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗದ ಹಿನ್ನೆಲೆ ರೈತನೋರ್ವ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಿಲ್ಲೆಯಲ್ಲಿ ಜರುಗಿದೆ.

ಶಾಮಣ್ಣ(48) ಆತ್ಮಹತ್ಯೆ ಮಾಡಿಕೊಂಡ ರೈತ. ಮೂಲತಃ ಹಾಸನ ತಾಲೂಕಿನ ಗ್ಯಾರಹಳ್ಳಿ ಗ್ರಾಮದವರು. ತನ್ನ ಜಮೀನಿನಲ್ಲಿ ಕ್ಯಾರೆಟ್, ಬೀಟ್ ರೂಟ್ ಮತ್ತು ಶುಂಠಿ ಬಿಳೆದಿದ್ದು, ಕೊರೊನಾ ಮಧ್ಯೆ ತಾನು ಬೆಳೆದಿದ್ದ ಬೆಳೆಗಳನ್ನು ಮಾರಾಟ ಮಾಡಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮತ್ತು ಸರ್ಕಾರದಿಂದ ಬೆಂಬಲ ಬೆಲೆ ಸಿಗದ ಕಾರಣ ಮನನೊಂದು ಬೆಳೆಗೆ ಸಿಂಪಡಿಸಲು ಇಟ್ಟಿದ್ದ ಕೀಟನಾಶಕವನ್ನು ಸೇವಿಸಿ ಆತ್ಮಹತ್ಯೆಗೆ ಪ್ರಯತ್ನಿಸಿದ್ದ.

ಸಾವು ಬದುಕಿನಲ್ಲಿ ಹೋರಾಟ ಮಾಡುತ್ತಿದ್ದ ರಾಮಣ್ಣನನ್ನ ಸಂಬಂಧಿಕರು ಹಾಸನದ ಜಯಚಾಮರಾಜೇಂದ್ರ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಿದರೂ ಫಲಕಾರಿಯಾಗದೆ ಕೊನೆಯುಸಿರೆಳೆದಿದ್ದಾರೆ.

ಈ ಸಂಬಂಧ ಹಾಸನದ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಶವಾಗಾರಕ್ಕೆ ರವಾನಿಸಲಾಗಿದೆ.

ABOUT THE AUTHOR

...view details