ಕರ್ನಾಟಕ

karnataka

ETV Bharat / state

ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಜಾರಿ ಮಾಡದಂತೆ ಒತ್ತಾಯ - hasana leatest news

ರಾಜ್ಯ ಸರ್ಕಾರ ಜನ ವಿರೋಧಿಯ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ ಹಾಗೂ ಸೆ. 21ರಿಂದ ವಿಧಾನಸಭೆ ಅಧಿವೇಶನದಲ್ಲಿ ಶಾಸನ ಸಭೆಯ ಅಂಗೀಕಾರ ಪಡೆಯುವುದಕ್ಕಾಗಿ ಅಜೆಂಡಾ ಪಟ್ಟಿಯಲ್ಲಿ ಇಟ್ಟಿದೆ. ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

Farmer and Labor insist on issuing anti-labor ordinance
ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಜಾರಿ ಮಾಡದಂತೆ ಒತ್ತಾಯ

By

Published : Sep 19, 2020, 2:22 PM IST

Updated : Sep 19, 2020, 3:20 PM IST

ಹಾಸನ: ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆಗಳನ್ನು ಜಾರಿ ಮಾಡದಂತೆ ಒತ್ತಾಯಿಸಿ ಭಾರತ ಕಮ್ಯೂನಿಸ್ಟ್‌ ಪಕ್ಷದಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿ ಆರ್. ಗೀರೀಶ್ ಅವರಿಗೆ ಮನವಿ ಸಲ್ಲಿಸಲಾಯಿತು.

ರೈತ ಹಾಗೂ ಕಾರ್ಮಿಕ ವಿರೋಧಿ ಸುಗ್ರೀವಾಜ್ಞೆ ಜಾರಿ ಮಾಡದಂತೆ ಒತ್ತಾಯ

ರಾಜ್ಯ ಸರ್ಕಾರ ಜನ ವಿರೋಧಿಯ ಮೂರು ಸುಗ್ರೀವಾಜ್ಞೆಗಳನ್ನು ಹೊರಡಿಸಿದೆ ಹಾಗೂ ಸೆ. 21ರಿಂದ ವಿಧಾನಸಭೆ ಅಧಿವೇಶನದಲ್ಲಿ ಶಾಸನ ಸಭೆಯ ಅಂಗೀಕಾರ ಪಡೆಯುವುದಕ್ಕಾಗಿ ಅಜೆಂಡಾ ಪಟ್ಟಿಯಲ್ಲಿ ಇಟ್ಟಿದೆ. ಇದನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

ಕರ್ನಾಟಕ ಭೂ ಸುಧಾರಣಾ ತಿದ್ದುಪಡಿ ಕಾಯ್ದೆ ಸುಗ್ರೀವಾಜ್ಞೆ, ಎಪಿಎಂಸಿ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ, ಕೈಗಾರಿಕಾ ವ್ಯಾಜ್ಯಗಳು ಮತ್ತು ಇತರ ಕಾಯ್ದೆ ತಿದ್ದುಪಡಿ ಸುಗ್ರೀವಾಜ್ಞೆ ರಾಜ್ಯದ ರೈತಾಪಿ ಹಾಗೂ ಕಾರ್ಮಿಕ ಜನ ಸಮೂಹಗಳ ಮೇಲೆ ಅತ್ಯಂತ ಗಂಭಿರ ಪುಷ್ಪರಿಣಾಮಗಳನ್ನು ಉಂಟುಮಾಡಬಲ್ಲ ಸುಗ್ರೀವಾಜ್ಞೆಗಳಾಗಿವೆ. ಆದ್ದರಿಂದ‌ ಇವನ್ನು‌ ಜಾರಿ ಮಾಡಬಾರದು ಎಂದು ಒತ್ತಾಯಿಸಿದರು.

ಈ ಹಿನ್ನೆಲೆಯಲ್ಲಿ ಕರ್ನಾಟಕ ವಿಧಾನಸಭೆ ಅಂಗೀಕಾರಕ್ಕೆ ಚರ್ಚೆಗೆ ಬರುತ್ತಿರುವ ಈ ಮೇಲಿನ ಸುಗ್ರೀವಾಜ್ಞೆಗಳನ್ನು ಸಂಪೂರ್ಣವಾಗಿ ವಿರೋಧಿಸಿ ಶಾಸನ ಆಗದಂತೆ ಕ್ರಮ ವಹಿಸಬೆಕೆಂದು ಒತ್ತಾಯಿಸಿ ಜಿಲ್ಲಾಧಿಕಾರಿ ಅವರಿಗೆ ಮನವಿ ಸಲ್ಲಿಸಿದರು.

Last Updated : Sep 19, 2020, 3:20 PM IST

ABOUT THE AUTHOR

...view details