ಅರಕಲಗೂಡು: ದೂಡ್ಡಮಗ್ಗೆ ಹೋಬಳಿಯ ಉಪ ತಹಶೀಲ್ದಾರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ಅಂಜನಪ್ಪನವರು ನಿವೃತ್ತಿ ಹೊಂದಿದ್ದು, ನಿನ್ನೆ ರಾಮನಾಥಪುರ ಹಾಗೂ ದೊಡ್ಡಮಗ್ಗೆ ನಾಡ ಕಚೇರಿಯ ಎಲ್ಲಾ ಸಿಬ್ಬಂದಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
ನಿವೃತ್ತ ಉಪ ತಹಶೀಲ್ದಾರ್ ಅಂಜನಪ್ಪನವರಿಗೆ ಬೀಳ್ಕೊಡುಗೆ - ಅರಕಲಗೂಡು ಉಪ ತಹಶೀಲ್ದಾರ್ ಬೀಳ್ಕೊಡುಗೆ ನ್ಯೂಸ್
ದೂಡ್ಡಮಗ್ಗೆಯ ಉಪ ತಹಶೀಲ್ದಾರ್ ಅಂಜನಪ್ಪನವರು ನಿವೃತ್ತಿ ಹೊಂದಿದ್ದು, ನಿನ್ನೆ ನಾಡ ಕಚೇರಿಯ ಎಲ್ಲಾ ಸಿಬ್ಬಂದಿ ಅವರನ್ನು ಸನ್ಮಾನಿಸಿ ಬೀಳ್ಕೊಟ್ಟರು.
Farewell party
ಅಂಜನಪ್ಪನವರು ರಾಮನಾಥಪುರ ಹೋಬಳಿಯಲ್ಲಿ ಸುಮಾರು 4 ವರ್ಷಗಳ ಕಾಲ ರಾಜಸ್ವನಿರೀಕ್ಷಕರಾಗಿ ಹಾಗೂ ಪ್ರಭಾರ ಉಪ ತಹಶೀಲ್ದಾರ್ ಆಗಿ ಉತ್ತಮ ಕಾರ್ಯನಿರ್ವಹಿಸಿದ್ದಾರೆ.
ಈ ಸಂದರ್ಭದಲ್ಲಿ ತಾಲೂಕು ಕಚೇರಿಯ ಶಿರಸ್ತೇದಾರರಾದ ಅಂಕೇಗೌಡ, ಉಪ ತಹಶೀಲ್ದಾರ್ ಆದ ನಂಜೇಗೌಡ, ಜಿ.ಸಿ.ಚಂದ್ರು, ರಾಜಸ್ವನಿರೀಕ್ಷಕರಾದ ಸಿ.ಸ್ವಾಮಿ, ರಾಘವೇಂದ್ರ, ಶಿವಕುಮಾರ್, ಕಿರಣ್, ಎಲ್ಲಾ ಗ್ರಾಮಲೆಕ್ಕಿಗರು ಹಾಗೂ ಗ್ರಾಮ ಸಹಾಯಕರು, ಸಿಬ್ಬಂದಿ ಹಾಜರಿದ್ದರು.