ಕರ್ನಾಟಕ

karnataka

ETV Bharat / state

ಬರೆದ ಪರೀಕ್ಷೆಯಲ್ಲಿ ಫೇಲಾದೆವೆಂದು ಬದುಕು ಮುಗಿಸಿದ ವಿದ್ಯಾರ್ಥಿನಿಯರು! - ಶಿವಮೊಗ್ಗ

ಪಿಯು ಪರೀಕ್ಷೆಯಲ್ಲಿ ಫೇಲ್​ ಆಗಿದ್ದರಿಂದ ಮನನೊಂದ ವಿದ್ಯಾರ್ಥಿನಿಯರಿಬ್ಬರು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

student suicide in hassan
student suicide in hassan

By

Published : Jul 14, 2020, 10:18 PM IST

Updated : Jul 14, 2020, 10:27 PM IST

ಅರಕಲಗೂಡು/ಶಿವಮೊಗ್ಗ:ಇಂದು ಪ್ರಕಟಗೊಂಡಿರುವ ದ್ವಿತೀಯ ಪಿಯು ಫಲಿತಾಂಶದಲ್ಲಿ ಅನುತ್ತೀರ್ಣಗೊಂಡಿದ್ದ ವಿದ್ಯಾರ್ಥಿನಿಯರಿಬ್ಬರು ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

ಹಾಸನದ ಅರಕಲಗೂಡಿನ ಮಲ್ಲಿಪಟ್ಟಣ ಹೋಬಳಿ ಕೋಠಿ ದಾಸಯ್ಯನಕೊಪ್ಪಲು ನಿವಾಸಿ ಭೂಮಿಕಾ (18) ಆತ್ಮಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿಯಾಗಿದ್ದಾಳೆ. ಈಕೆ ಹಾಸನ ವಿಭಜಿತ ಪಿಯು ಕಾಲೇಜಿನಲ್ಲಿ ದ್ವಿತೀಯ ಪಿಯು ವ್ಯಾಸಂಗ ಮಾಡಿದ್ದಳು. ಮಂಗಳವಾರ ಫಲಿತಾಂಶ ಘೋಷಣೆಯಾಗಿದ್ದು, ಫೇಲ್​ ಆಗಿರುವ ಮಾಹಿತಿ ಗೊತ್ತಾಗುತ್ತಿದ್ದಂತೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಇದನ್ನೂ ಓದಿ:ದ್ವಿತೀಯ ಪಿಯು ಫಲಿತಾಂಶದಲ್ಲಿ ಅನುತ್ತೀರ್ಣ: ಚಿಂತಾಮಣಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣು

ಶಿವಮೊಗ್ಗದ ವಿದ್ಯಾರ್ಥಿನಿ ಚೈತ್ರ

ಇದನ್ನೂ ಓದಿ: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣ: ಹರಿಹರದಲ್ಲಿ ವಿದ್ಯಾರ್ಥಿ ಆತ್ಮಹತ್ಯೆ

ಶಿವಮೊಗ್ಗದಲ್ಲೂ ವಿದ್ಯಾರ್ಥಿನಿ ಆತ್ಮಹತ್ಯೆ:

ಶಿವಮೊಗ್ಗದಲ್ಲೂ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಪರೀಕ್ಷೆಯಲ್ಲಿ ಅನುತ್ತಿರ್ಣಳಾದ ಹಿನ್ನೆಲೆಯಲ್ಲಿ ಮನನೊಂದು ನೇಣು ಬಿಗಿದುಕೊಂಡು ಚೈತ್ರ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ತಾಲೂಕಿನ ಕುಂಸಿ ಬಳಿಯ ಮರಸ ಗ್ರಾಮದ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದು, ಮನೆಗೆ ತಂದೆ-ತಾಯಿ ಬಂದು ನೋಡಿದ ಮೇಲೆ ವಿಷಯ ಬಹಿರಂಗೊಂಡಿದ್ದು, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Last Updated : Jul 14, 2020, 10:27 PM IST

ABOUT THE AUTHOR

...view details