ಹಾಸನ: ಚುನಾವಣೆಯಲ್ಲಿ ನೀಡಿದ ಭರವಸೆಯಂತೆ ಕಾಂಗ್ರೆಸ್ ಸರ್ಕಾರವು ತಿಂಗಳಾದರೂ ಇದುವರೆಗೂ ಐದು ಗ್ಯಾರಂಟಿ ಜಾರಿ ಮಾಡಿಲ್ಲ ಎಂದು ವ್ಯಂಗ್ಯವಾಡಿದ ಅವರು, ಮುಂದೆ ನಡೆಯಲಿರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಯಾವ ಕಾರಣಕ್ಕೂ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂದು ಮಾಜಿ ಸಚಿವ ಆರ್. ಅಶೋಕ್ ತಿಳಿಸಿದರು.
ನಗರದ ಹೊರವಲಯದಲ್ಲಿರುವ ಹೆಚ್ಎಂಟಿ ಸಮುದಾಯ ಭವನದಲ್ಲಿ ಶನಿವಾರ ಹಮ್ಮಿಕೊಂಡಿದ್ದ ಜಿಲ್ಲಾ ಮಟ್ಟದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ, ಮಾಧ್ಯಮದೊಂದಿಗೆ ಮಾತನಾಡಿದ ಅವರು, ಲೋಕಸಭಾ ಚುನಾವಣೆ ತಯಾರಿಗೆ ನರೇಂದ್ರ ಮೋದಿ ಅವರು ತಮ್ಮ 9 ವರ್ಷದ ಸಾಧನೆಯನ್ನು ಮನೆ ಮನೆಗೆ ಮುಟ್ಟಿಸುತ್ತೇವೆ. ಅಟಲ್ ಬಿಹಾರಿ ವಾಜಪೇಯಿ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು ತಿಂಗಳಾದರೂ, ಗ್ಯಾರಂಟಿ ಯಾವುದು ಇನ್ನೂ ಜಾರಿಯಾಗಿರುವುದಿಲ್ಲ. ಈಗಾಗಲೇ ಬಸ್ ಡೋರ್ ಕಿತ್ತು ಹಾಕುವುದೇ ಅವರ ಗ್ಯಾರಂಟಿ ಆಗಿದೆ. ಕೆಲವು ಗ್ಯಾರಂಟಿಗಳೊಂದಿಗೆ ಮೋದಿ ಹೆಸರು ಹೇಳುತ್ತಿದ್ದಾರೆ. ನಮಗಿಂತ ಹೆಚ್ಚಾಗಿ ಮೋದಿ ಹೆಸರನ್ನು ಕಾಂಗ್ರೆಸ್ ಹೇಳುತ್ತಿದೆ. ಅವರ ಬಳಿ ಹಣವಿಲ್ಲ ರಾಜ್ಯದ ಖಜಾನೆ ಖಾಲಿಯಾಗಿದೆ. ನಮ್ಮ ಮೇಲೆ ಅಕ್ಕಿಕೊಡದ ಅರೋಪ, ಅದು ಕಾಂಗ್ರೆಸ್ ಪ್ರಣಾಳಿಕೆ ಎಂದು ಟಾಂಗ್ ನೀಡಿದರು.
ಅಕ್ಕಿ ಕೊಡಲು 10 ಸಾವಿರ ಕೋಟಿ ಹಣ ಬೇಕು. ಯಾರದೋ ಮ್ಯಾನೇಜರ್ ಗೆ ಬರೆದ ಲೆಟರ್ ಇಟ್ಟುಕೊಂಡು ಆಟ ಆಡುತ್ತಿದ್ದಾರೆ. ಲೋಕಸಭಾ ಚುನಾವಣೆವರೆಗೆ ಮೋದಿ ಟಾರ್ಗೆಟ್. ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ - ಬಿಜೆಪಿ ಮೈತ್ರಿ ಚರ್ಚೆ ಇಲ್ಲ. ಅದರ ಬಗ್ಗೆ ಯೋಚನೆ ಕೂಡ ಇಲ್ಲ ಎಂದು ಅಶೋಕ್ ಸ್ಪಷ್ಟಪಡಿಸಿದರು.
ಪ್ರಧಾನಿ ನರೇಂದ್ರ ಮೋದಿ ಅವರು 5 ಕೆ ಜಿ ಅಕ್ಕಿ ಕೊಡುತ್ತಿದ್ದಾರೆ. ಚೀಲದ ಹಣ ಮಾತ್ರ ಸಿದ್ದರಾಮಯ್ಯ ಕೊಡುತ್ತಿದ್ದಾರೆ. ಮಾನ ಮರ್ಯಾದೆ ಇದ್ದರೆ ಘೋಷಣೆ ಮಾಡುವುದಕ್ಕೆ ಮುಂಚೆ ಕೇಂದ್ರ ಸರ್ಕಾರ ಹಾಗೂ ಫುಡ್ ಕಾರ್ಪೊರೇಷನ್ ಕೇಳಬೇಕಿತ್ತು. ನಳಿನ್ ಕುಮಾರ್ ಕಟೀಲ್ ಇದ್ದು, ರಾಜ್ಯದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರ ಹುದ್ದೆ ಖಾಲಿ ಇರುವುದಿಲ್ಲ ಎಂದು ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಮಾಜಿ ಡಿಸಿಎಂ ಅಶೋಕ್ ಉತ್ತರಿಸಿದರು.