ಕರ್ನಾಟಕ

karnataka

ETV Bharat / state

ಸರ್ಕಾರದಿಂದ ವಿಶೇಷ ಆರ್ಥಿಕ ಪ್ಯಾಕೇಜ್‌: ಈಟಿವಿ ಭಾರತಕ್ಕೆ ಆಟೋ ಚಾಲಕರ ಧನ್ಯವಾದ - ಈಟಿವಿ ಭಾರತಕ್ಕೆ ಧನ್ಯವಾದ ಹೇಳಿದ ಆಟೋ ಚಾಲಕರು

ಕೋವಿಡ್ ಎರಡನೇ ಅಲೆ ಬಂದ ಮೇಲೆ ಆಟೋ ಚಾಲಕ ವೃತ್ತಿಯನ್ನೇ ನಂಬಿರುವ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಈಟಿವಿ ಭಾರತ, ಅವರ ಬದುಕಿನ ಸಂಕಷ್ಟವನ್ನು ಆಲಿಸುವ ಮೂಲಕ 'ಕೊರೊನಾ ಲಾಕ್​ಡೌನ್: ಸಂಕಷ್ಟ ಹೇಳಿಕೊಂಡ ಹಾಸನದ ​​​ಆಟೋ ಚಾಲಕರು' ಎಂಬ ಶೀರ್ಷಿಕೆಯಡಿ ವಿಶೇಷ ವರದಿಯೊಂದನ್ನು ಮೇ.18ರಂದು ಪ್ರಕಟಿಸಿತ್ತು.

Hassan
ಈಟಿವಿ ಭಾರತಕ್ಕೆ ಧನ್ಯವಾದ ಹೇಳಿದ ಆಟೋ ಚಾಲಕರು

By

Published : May 20, 2021, 9:07 AM IST

ಹಾಸನ:ಲಾಕ್​​ಡೌನ್ ಹಿನ್ನೆಲೆಯಲ್ಲಿ ಆಟೋ ಚಾಲಕರ ಬದುಕಿನ ಬವಣೆ ಕುರಿತು ಈಟಿವಿ ಭಾರತ ವಿಶೇಷ ವರದಿಯೊಂದನ್ನು ಬಿತ್ತರಿಸಿತ್ತು. ಈ ವರದಿ ಬಿತ್ತರವಾದ ಬೆನ್ನಲ್ಲೇ ಸರ್ಕಾರ ಚಾಲಕರಿಗೆ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದ್ದು, ಆಟೋ ಚಾಲಕರು ಸಂತಸ ವ್ಯಕ್ತಪಡಿಸಿದರು.

ಈಟಿವಿ ಭಾರತಕ್ಕೆ ಧನ್ಯವಾದ ಹೇಳಿದ ಆಟೋ ಚಾಲಕರು

ಕೋವಿಡ್ ಎರಡನೇ ಅಲೆ ಬಂದ ಮೇಲೆ ಆಟೋ ಚಾಲಕ ವೃತ್ತಿಯನ್ನೇ ನಂಬಿ ಸಾವಿರಾರು ಕುಟುಂಬಗಳು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಇದನ್ನು ಮನಗಂಡ ಈಟಿವಿ ಭಾರತ, ಆಟೋ ಚಾಲಕರ ಬದುಕಿನ ಸಂಕಷ್ಟವನ್ನು ಆಲಿಸುವ ಮೂಲಕ 'ಕೊರೊನಾ ಲಾಕ್​ಡೌನ್: ಸಂಕಷ್ಟ ಹೇಳಿಕೊಂಡ ಹಾಸನದ ​​​ಆಟೋ ಚಾಲಕರು' ಎಂಬ ಶೀರ್ಷಿಕೆಯಡಿ ವಿಶೇಷ ವರದಿಯೊಂದನ್ನು ಮೇ.18ರಂದು ಪ್ರಕಟಿಸಿತ್ತು.

ಸರ್ಕಾರ ಸಹಾಯ ಧನ ಘೋಷಣೆ ಮಾಡಿರುವುದು ಖುಷಿಯ ವಿಚಾರ. ಆದ್ರೆ ನಾವು ಇಂತಹ ತುರ್ತು ಪರಿಸ್ಥಿತಿಯಲ್ಲಿ ಸುಮ್ಮನೆ ಆಟೋ ಓಡಿಸಲ್ಲ. ರೋಗಿಗಳ ಸೇವೆಗಾಗಿ ಮಾತ್ರ ಆಟೋ ಸೀಮಿತವಾಗಲಿದೆ. ಸಿಎಂ ಘೋಷಣೆ ಮಾಡಿರುವ ಸಹಾಯಧನ ದುರುಪಯೋಗವಾಗದಂತೆ ನೋಡಿಕೊಳ್ಳಬೇಕು. ಕಳೆದ ಬಾರಿ ಅರ್ಜಿ ಸಲ್ಲಿಸಿದ್ರೂ ಹಣ ಬಂದಿಲ್ಲ. ಹಲವರು ಆಟೋ ಇಲ್ಲದೆಯೂ ದುಡ್ಡು ಪಡೆದಿದ್ದಾರೆ. ಈ ಸಲ ಆ ರೀತಿಯಾಗದಂತೆ ನೋಡಿಕೊಳ್ಳಬೇಕು. ನಿಜವಾದ ಫಲಾನುಭವಿಗಳಿಗೆ ಪರಿಹಾರ ಧನ ತಲುಪುವಂತೆ ನೋಡಿಕೊಳ್ಳಬೇಕು ಎಂದು ಆಟೋ ಚಾಲಕ ರವಿಕುಮಾರ್ ಹೇಳಿದ್ದಾರೆ.

ಆಟೋ ಚಾಲಕ ಶಿವಣ್ಣ ಮಾತನಾಡಿ, ಕಳೆದ ಬಾರಿಯೂ ಹಣ ಬಂದಿತ್ತು. ಈ ಬಾರಿ ಅರ್ಜಿ ಸಲ್ಲಿಸುತ್ತೇನೆ. ಮೊನ್ನೆ ಮೊನ್ನೆ ಈಟಿವಿ ಭಾರತ ವಾಹಿನಿಯವರು ನಮ್ಮ ಕಷ್ಟ ಕೇಳಿದ್ರು. ಸಿಎಂ ಯಡಿಯೂರಪ್ಪ ಪ್ಯಾಕೇಜ್ ಘೋಷಣೆ ಮಾಡಿರುವುದು ಖುಷಿ ತಂದಿದೆ. ಸರ್ಕಾರಕ್ಕೆ ಮತ್ತು ಈಟಿವಿ ಭಾರತಕ್ಕೆ ಧನ್ಯವಾದ ಎಂದರು.

ಇದನ್ನೂ ಓದಿ:ಕೊರೊನಾ ಲಾಕ್​ಡೌನ್: ಸಂಕಷ್ಟ ಹೇಳಿಕೊಂಡ ಹಾಸನದ ​​​ಆಟೋ ಚಾಲಕರು

ABOUT THE AUTHOR

...view details