ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: ಸಹಕಾರ ಸಂಘದ 3 ಮಂದಿ ಅಧಿಕಾರಿಗಳ ಅಮಾನತು - ಈ ಟಿವಿ ವರದಿ ಫಲಶೃತಿ ಮೂರು ಮಂದಿ ಕಾರ್ಯದರ್ಶಿಗಳ ಅಮಾನತು

ಸಾಲ ಮನ್ನ ಯೋಜನೆಯಡಿ ಬಿಡುಗಡೆಯಾಗಿದ್ದ ಹಣವನ್ನು ರೈತರಿಗೆ ನೀಡದೆ ವಂಚಿಸಿದ್ದ ಆರೋಪದಡಿ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು 3 ಮಂದಿಯನ್ನ ಅಮಾನತುಗೊಳಿಸಿದ್ದಾರೆ.

ಈ ಟಿವಿ ವರದಿ ಫಲಶೃತಿ ಮೂರು ಮಂದಿ ಕಾರ್ಯದರ್ಶಿಗಳ ಅಮಾನತು

By

Published : Jul 15, 2019, 8:47 PM IST

ಹಾಸನ: ಸಹಕಾರ ಸಂಘದಲ್ಲಿ ಸಾಲ ಮನ್ನ ಯೋಜನೆಯಡಿ ಬಿಡುಗಡೆಯಾಗಿದ್ದ ಹಣವನ್ನು ರೈತರಿಗೆ ನೀಡದೆ ವಂಚಿಸಿದ್ದ ಆರೋಪ ಕೇಳಿಬಂದ ಹಿನ್ನೆಲೆ ಜು. 11ರಂದು ಈಟಿವಿ ಭಾರತ ಈ ಕುರಿತು ಒಂದು ವರದಿ ಮಾಡಿತ್ತು. ಇನ್ನು ಈ ವರದಿ ನೋಡಿ ಎಚ್ಚೆತ್ತುಕೊಂಡ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು, 3 ಮಂದಿಯನ್ನ ಅಮಾನತುಗೊಳಿಸಿದ್ದಾರೆ.

ಈಟಿವಿ ವರದಿ ಫಲಶೃತಿ: ಮೂರು ಮಂದಿ ಕಾರ್ಯದರ್ಶಿಗಳ ಅಮಾನತು

ಹೌದು, ಈ ಪ್ರಕರಣ ಕುರಿತಂತೆ ವರದಿ ಬಂದ ಹಿನ್ನೆಲೆ ಮಾಜಿ ಶಾಸಕ ವರದಿ ನೋಡಿ ಸಿಒಡಿ ತನಿಖೆಗೆ ಪ್ರಕರಣವನ್ನ ವಹಿಸಬೇಕು ಎಂದು ಆಗ್ರಹಿಸಿದ್ರು. ಆದ್ರೆ ಈಗ ವರದಿಯಿಂದ ಎಚ್ಚೆತ್ತ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷರು, 3 ಮಂದಿಯನ್ನ ಅಮಾನತು ಮಾಡಿದ್ದಾರೆ.

ಚನ್ನರಾಯಪಟ್ಟಣದ ಗೌಡಗೆರೆ ಸಹಕಾರ ಸಂಘದಲ್ಲಿ ನಡೆದಿದ್ದ ಸಾಲ ಮನ್ನ ಗೋಲ್​​ಮಾಲ್ ಪ್ರಕರಣದ ವರದಿ ಪ್ರಸಾರವಾದ ಹಿನ್ನೆಲೆಯಲ್ಲಿ ವಂಚನೆ ಮಾಡಿದ್ದ ಮಂಜೇಗೌಡ ಎಂಬಾತ ₹ 15 ಲಕ್ಷ ಹಣವನ್ನ ರೈತರ ಮನೆಗೆ ಹೋಗಿ ಹಿಂದಿರುಗಿಸಿದ್ದ. ಇದು ಅನುಮಾನಕ್ಕೆ ಮತ್ತಷ್ಟು ಪುಷ್ಠಿ ನೀಡಿದ್ದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಮಾಜಿ ಶಾಸಕ ಸಿ.ಎಸ್.ಪುಟ್ಟೇಗೌಡ ಆಗ್ರಹಿಸಿದ್ರು. ನಂತರ ಜಿಲ್ಲಾ ಸಹಕಾರ ಬ್ಯಾಂಕ್ ಅಧ್ಯಕ್ಷ ನಾಗರಾಜು, ಸಾಲ ಮನ್ನದ ಹಣವನ್ನ ದುರುಪಯೋಗ ಮಾಡಿಕೊಂಡ ಮೂರು ಮಂದಿಯನ್ನ ಅಮಾನತು ಮಾಡಿದ್ದಾರೆ.

ಇನ್ನು, ರೈತರ ಸಾಲಮನ್ನಾ ವಿತರಣೆಯಲ್ಲಿ ಹಣವನ್ನ ದುರುಪಯೋಗ ಪಡಿಸಿಕೊಂಡಿರುವುದಾಗಿ ಸಹಕಾರ ಸಂಘದ ಕಾರ್ಯದರ್ಶಿಗಳೇ ಒಪ್ಪಿಕೊಂಡಿದ್ದಾರೆ. ಹೀಗಾಗಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ ಮೂವರು ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಅಮಾನತು ಮಾಡಿದ್ದು, ಈ ಸಂಬಂಧ ಕ್ರಿಮಿನಲ್ ಕೇಸ್ ದಾಖಲಿಸುವುದಾಗಿ ಬ್ಯಾಂಕ್ ಅಧ್ಯಕ್ಷ ನಾಗರಾಜ್ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

For All Latest Updates

TAGGED:

ABOUT THE AUTHOR

...view details