ಕರ್ನಾಟಕ

karnataka

ETV Bharat / state

ಈಟಿವಿ ಭಾರತ ಫಲಶೃತಿ: ನಿರಾಶ್ರಿತರಿಗೆ ಆಸರೆಯಾದ ತಾಲೂಕಾಡಳಿತ

ಹಾಸನ ಜಿಲ್ಲೆ ಅರಕಲಗೂಡಿನಲ್ಲಿ ನಿರಾಶ್ರಿತ ವ್ಯಕ್ತಿಯೊಬ್ಬ ಹಸಿವಿನಿಂದ ಸಾವನ್ನಪ್ಪಿದ ಸುದ್ದಿ ಪ್ರಕಟವಾದ ಬೆನ್ನಲ್ಲೇ ತಹಶೀಲ್ದಾರ್ ಸೂಕ್ತ ಕ್ರಮ ತೆಗೆದುಕೊಂಡಿದ್ದಾರೆ. ಇಂತಹ ಪ್ರಕರಣಗಳು ಕಂಡು ಬಂದಲ್ಲಿ ತಿಳಿಸುವಂತೆ ಸೂಚಿಸಲಾಗಿದೆ.

etv bharat impact in hassan
ನಿರಾಶ್ರಿತರಿಗೆ ಆಸರೆ

By

Published : Apr 5, 2020, 10:17 PM IST

ಹಾಸನ: ಲಾಕ್​ಡೌನ್​ ಹಿನ್ನೆಲೆ ವ್ಯಕ್ತಿಯೊಬ್ಬ ಹಸಿವಿನಿಂದ ಸಾವನ್ನಪ್ಪಿದ ಸುದ್ದಿ ಪ್ರಕಟಗೊಂಡ ಹಿನ್ನೆಲೆ ತಾಲೂಕು ಆಡಳಿತ ಎಚ್ಚೆತ್ತುಕೊಂಡಿದೆ.

ನಿರಾಶ್ರಿತರಿಗೆ ಆಸರೆ

ಪಟ್ಟಣದಲ್ಲಿರುವ ನಿರಾಶ್ರಿತರನ್ನು ಸರ್ಕಾರಿ ನಿರಾಶ್ರಿತ ತಾಣಗಳಿಗೆ ವರ್ಗಾಯಿಸುವ ಕಾರ್ಯಕ್ಕೆ ಮುಂದಾಗಿದ್ದಾರೆ.

ಜಿಲ್ಲೆಯ ಅರಕಲಗೂಡಿನಲ್ಲಿ ಇಂದು ಬೆಳಗ್ಗೆ ನಿರಾಶ್ರಿತ ವ್ಯಕ್ತಿಯೋರ್ವ ಹಸಿವಿನಿಂದ ಸಾವಿಗೀಡಾದ ಸುದ್ದಿಯನ್ನು ಈಟಿವಿ ಭಾರತ ಪ್ರಕಟಿಸಿತ್ತು. ಇದಕ್ಕೆ ಸ್ಪಂದಿಸಿದ ತಹಶೀಲ್ದಾರ್ ರೇಣುಕುಮಾರ್ ತಕ್ಷಣ ಪಟ್ಟಣದ ಮುಖ್ಯ ರಸ್ತೆಗಳಿಗೆ ಭೇಟಿ ನೀಡಿ, ನಿರಾಶ್ರಿತರನ್ನು ಕರೆ ತರಲಾಯಿತು.

ಲಾಕ್​ಡೌನ್ ಮುಗಿಯುವವರೆಗೆ ಸರ್ಕಾರದ ನಿರಾಶ್ರಿತ ತಾಣಗಳಲ್ಲಿ ಇರಿಸಿ, ಊಟೋಪಚಾರ ನೀಡಲಾಗುವುದು. ತಾಲೂಕಿನ ಸುತ್ತಮುತ್ತ ಇರುವ ನಿರಾಶ್ರಿತರ ಮಾಹಿತಿಯನ್ನು ನಾಗರಿಕರು ನೀಡಿದರೆ ಅಂಥವರನ್ನು ಕೂಡ ಕರೆ ತರಲಾಗುವುದು ಎಂದರು. ಅಲ್ಲದೆ ವರದಿ ಪ್ರಕಟಿಸಿ ಮಾಹಿತಿ ಸಿಗವಂತೆ ಮಾಡಿದ್ದಕ್ಕೆ ತಹಶೀಲ್ದಾರ್ ಈಟಿವಿ ಭಾರತ್​ಗೆ ಧನ್ಯವಾದ ತಿಳಿಸಿದರು.

ABOUT THE AUTHOR

...view details