ಹಾಸನ: ಈಶ್ವರಪ್ಪ ಮಹಾ ಪೆದ್ದ. ನಾನು ಅನೇಕ ಸಾರಿ ಹೇಳಿದ್ದೇನೆ ಆತನಿಗೆ ನಾಲಿಗೆಗೂ ಬ್ರೈನ್ಗು ಲಿಂಕ್ ತಪ್ಪೋಗಿದೆ ಏನೇನೋ ಮಾತನಾಡುತ್ತಾನೆ ಎಂದು ಈಶ್ವರಪ್ಪ ವಿರುದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹರಿಹಾಯ್ದರು. ಹಾಸನದ ಅರಕಲಗೂಡಿನಲ್ಲಿ ಕನಕದಾಸ ಹಾಗೂ ಸಂಗೊಳ್ಳಿ ರಾಯಣ್ಣನ ಪ್ರತಿಮೆ ಅನಾವರಣ ಮಾಡಿದ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪ್ರಧಾನಿ ಬಗ್ಗೆ ಮಾತನಾಡಲು ಯೋಗ್ಯತೆ ಇಲ್ಲ ಎನ್ನುವುದಾದರೆ ಯೋಗ್ಯತೆ ಎಂದರೇನು? ಕ್ವಾಲಿಫಿಕೇಷನ್ ಅಂದರೇನು? ಎಂದು ಪ್ರಶ್ನಿಸಿದರು.
ನಾನು ಕರ್ನಾಟಕದ ವಿರೋಧ ಪಕ್ಷದ ನಾಯಕ, ಕಾಂಗ್ರೆಸ್ ಪಕ್ಷದ ಸದಸ್ಯ, ನಾನು ಶಾಸಕಾಂಗದಲ್ಲಿದ್ದೇನೆ, ನನಗೆ ಯೋಗ್ಯತೆ ಇಲ್ಲ ಅಂದರೆ ಯಾರಿಗೇ ಯೋಗ್ಯತೆ ಇರುತ್ತದೆ ಎಂದು ಪ್ರಶ್ನಿಸಿದರು. ಸರ್ಕಾರದ ಬಗ್ಗೆ ತಪ್ಪುಗಳನ್ನ ಹೇಳುವುದಕ್ಕೆ ನನ್ನಗೆ ಯೋಗ್ಯತೆ ಇಲ್ಲದ ಮೇಲೆ ಬೇರಿ ಯಾರಿಗೂ ಹೇಳಲು ಸಾಧ್ಯವಿಲ್ಲ, ನಾನು ಸರಿಯಾದ ವ್ಯಕ್ತಿ. ಸರ್ಕಾದ ದುರಾಡಳಿತ, ಸರ್ಕಾರದ ಭ್ರಷ್ಟಚಾರದ ಬಗ್ಗೆ ನನ್ನಲ್ಲದೇ ಯಾರು ಕೇಳೋದು ಎಂದು ಈಶ್ವರಪ್ಪ ಹೇಳಿಕೆ ಟಾಂಗ್ ಕೊಟ್ಟರು.
ಪ್ರತಿಯೊಬ್ಬರಿಗೂ ರಾಜಕೀಯ ಪ್ರಬುದ್ಧತೆ ಇರಬೇಕು:ಏನು ಈಶ್ವಪ್ಪ ಹೇಳುತ್ತಾರೆ. ಹಿಂದೆ ಈಶ್ವರಪ್ಪ ಅವರ ಇಲಾಖೆಯಲ್ಲಿ ಶೇ 40ರಷ್ಟು ಕಮಿಷನ್ ಕೇಳಿದರು ಎಂದು ಸಂತೋಷ್ ಪಾಟಿಲ್ ಆತ್ಮಹತ್ಯೆ ಮಾಡಿಕೊಂಡಿದ್ದರು, ಅವರಿಗೆ ಅರ್ಹತೆ ಇದೆಯಾ ಎಂದು ಪ್ರಶ್ನಿಸಿದರು. ಪ್ರತಿಯೊಬ್ಬರಿಗೂ ರಾಜಕೀಯ ಪ್ರಬುದ್ದತೆ ಇರಬೇಕು, ಯಾರು ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನು ಟೀಕಿಸುವವರು, ಯಾಕೆ ಮಾಡಬೇಕು, ತಪ್ಪುಗಳನ್ನು ಹೇಳುವವರು ಯಾರು. ನಾನು ವಿಪಕ್ಷ ನಾಯಕ, ನನ್ನಲ್ಲದೇ ಬೇರೆ ಯಾರಾದರು ಕೇಳುವುದಕ್ಕಾಗುತ್ತದೆಯೇ ಎಂದರು.