ಕರ್ನಾಟಕ

karnataka

ETV Bharat / state

ರಾಜ್ಯಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರ: ಡಿಸಿ ಆರ್​.ಗಿರೀಶ್​

ರಾಜ್ಯಕ್ಕೆ ವಿಶ್ವೇಶ್ವರಯ್ಯ ಕೊಡುಗೆ ಅಪಾರವಾಗಿದೆ, ಮುಂದಿನ ಪೀಳಿಗೆಗೆ ಅವರು ಮಾದರಿಯಾಗಿದ್ದಾರೆ ಎಂದು ಜಿಲ್ಲಾಧಿಕಾರಿ ಆರ್​.ಗಿರೀಶ್​ ಹೇಳಿದರು.

engineers day celebrating in hassan
ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ

By

Published : Sep 15, 2020, 6:20 PM IST

ಹಾಸನ: ಕರ್ನಾಟಕ ರಾಜ್ಯ ಹಾಗೂ ಹೊರ ರಾಜ್ಯಗಳಲ್ಲಿಯೂ ಸರ್.ಎಂ.ವಿಶ್ವೇಶ್ವರಯ್ಯನವರ ಕೊಡುಗೆ ಅಪಾರವಾಗಿದೆ ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.​

ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ

ನಗರದ ಲೋಕೋಪಯೋಗಿ ಇಲಾಖೆ ಆವರಣದಲ್ಲಿ ಸರ್.ಎಂ.ವಿಶ್ವೇಶ್ವರಯ್ಯನವರ ಪ್ರತಿಮೆಗೆ ಮಾಲಾರ್ಪಣೆ ನೆರವೇರಿಸಿ, ನಂತರ ಮಾತನಾಡಿದ ಅವರು, ಬೇರೆ ರಾಜ್ಯಗಳಿಗೆ ಹೋಲಿಸಿದರೆ, ಕರ್ನಾಟಕ ಮುಂದುವರೆದ ರಾಜ್ಯಗಳ ಪಟ್ಟಿಯಲ್ಲಿದೆ. ದೇಶಕ್ಕೆ ವಿಶ್ವೇಶ್ವರಯ್ಯನಂತವರು ಮರಳಿ ಹುಟ್ಟಿಬರಬೇಕಿದೆ. ಬಡತನದ ಹಿನ್ನೆಲೆ ಇರುವ ಅವರು ಎಂಜಿನಿಯರ್​ ಪದವಿ ಪಡೆದು, ದೇಶವೇ ಮೆಚ್ಚುವಂತಹ ಸೇವೆ ಸಲ್ಲಿಸಿದ್ದಾರೆ ಎಂದರು.

ಅವರಿಗೆ ಭಾರತ ರತ್ನದಂತಹ ಅನೇಕ ಪ್ರತಿಷ್ಠಿತ ಪ್ರಶಸ್ತಿಗಳನ್ನು ನೀಡಿ, ಗೌರವಿಸಲಾಗಿದೆ. ಇದು ದೇಶವೇ ಹೆಮ್ಮೆ ಪಡುವ ಸಂಗತಿ. ಇಷ್ಟೇ ಅಲ್ಲ, ಪುಣೆ ಮತ್ತು ಮುಂಬೈ ಸರ್ಕಾರದಲ್ಲಿ ಕಾರ್ಯನಿರ್ವಹಿಸಿದ್ದಾರೆ. ಮುಂಬೈನ 50 ಅಂತಸ್ತಿನ ಬಹುಮಹಡಿ ಕಟ್ಟಡಕ್ಕೆ ಇವರ ಹೆಸರನ್ನು ಇಡಲಾಗಿದೆ ಎಂದರು.

ಕಾವೇರಿ ನೀರಾವರಿ ನಿಗಮ, ಹೇಮಾವತಿ ಯೋಜನೆ ಸೇರಿದಂತೆ ಬೃಹತ್ ಪ್ರಾಜೆಕ್ಟ್​ಗಳಿಂದ ಸರ್.ಎಂ.ವಿಶ್ವೇಶ್ವರಯ್ಯ ಹೆಸರುವಾಸಿಯಾಗಿದ್ದಾರೆ. ಇವುಗಳು ನೂರಾರು ವರ್ಷಗಳ ಕಾಲ ಮುಂದಿನ ಪೀಳಿಗೆಗೆ ಅನುಕೂಲವಾಗುತ್ತದೆ ಎಂದರು.

ABOUT THE AUTHOR

...view details