ಕರ್ನಾಟಕ

karnataka

ETV Bharat / state

ಬೇಲೂರಲ್ಲಿ ಗಜರಾಜ ಪ್ರತ್ಯಕ್ಷ..! ಅರಣ್ಯಾಧಿಕಾರಿಗಳ ವಿರುದ್ಧ ಸ್ಥಳೀಯರು ಕೆಂಡಾಮಂಡಲ - Latest Elephant News In Hassan

ಹಾಸನ, ಬೇಲೂರು ತಾಲೂಕಿನ ಹಳೇಬೀಡು ಕೆರೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

elephant-visible-in-hassan
ಬೇಲೂರಲ್ಲಿ ಗಜರಾಜ ಪ್ರತ್ಯಕ್ಷ..

By

Published : Feb 3, 2020, 2:37 PM IST

ಹಾಸನ : ಬೇಲೂರು ತಾಲೂಕಿನ ಹಳೇಬೀಡು ಕೆರೆಯಲ್ಲಿ ಕಾಡಾನೆ ಪ್ರತ್ಯಕ್ಷವಾಗಿದ್ದು, ಸ್ಥಳೀಯರು ಆತಂಕಗೊಂಡಿದ್ದಾರೆ.

ಕಾಡು ಬಿಟ್ಟು ನಾಡಿನಲ್ಲೇ ವಾಸ ಆರಂಭಿಸಿರುವ ಗಜಪಡೆ, ಘೀಳಿಡುತ್ತಾ ಓಡಾಡುವುದು ಕಳೆದ ಕೆಲವು ದಿನಗಳಿಂದ ಸರ್ವೇ ಸಾಮಾನ್ಯವಾಗಿದೆ. ಹಲವು ವರ್ಷಗಳ ಬಳಿಕ ತುಂಬಿದ ಕೆರೆಗೆ ಬಂದ ಗಜರಾಜನ ವಿಡಿಯೋ ಮೊಬೈಲ್​​ನಲ್ಲಿ ಸೆರೆಯಾಗಿದೆ.

ಚಿಕ್ಕಮಗಳೂರು ಕಡೆಯಿಂದ ಬೇಲೂರಿನ ಬಂದಿರುವ ಕಾಡಾನೆ ಕೆರೆಯಲ್ಲಿ ವಿಹರಿಸುತ್ತಿರುವುದರಿಂದ, ಜನರಲ್ಲಿ ಆತಂಕ ಸೃಷ್ಟಿಸಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ಪರಿಶೀಲಿಸಿದ್ದಾರೆ.

ಬೇಲೂರಲ್ಲಿ ಗಜರಾಜ ಪ್ರತ್ಯಕ್ಷ..!

ಕಾಡಾನೆಗಳನ್ನು ನಿಯಂತ್ರಿಸುವಲ್ಲಿ ಅರಣ್ಯ ಅಧಿಕಾರಿಗಳು ಹಾಗೂ ಸರ್ಕಾರ ವಿಫಲವಾಗಿದೆ ಎಂದು ಸ್ಥಳೀಯರು ಅಸಮಾಧಾನಗೊಂಡಿದ್ದಾರೆ. ಅರಣ್ಯಾಧಿಕಾರಿಗಳು ಕಾಡಾನೆಯನ್ನು ಸಂಜೆಯ ನಂತರ ಸ್ಥಳಾಂತರಿಸುವುದಾಗಿ ತಿಳಿಸಿದ್ದಾರೆ‌.

ABOUT THE AUTHOR

...view details