ಕರ್ನಾಟಕ

karnataka

ETV Bharat / state

ಹೇಮಾವತಿ ಹಿನ್ನೀರಿನಲ್ಲಿ ಹೆಣ್ಣಾನೆಯ ಜಲಕ್ರೀಡೆ​.. ಭಯಭೀತರಾದ ರೈತರು - ಹಾಸನ ಆನೆ ಸುದ್ದಿ

ಬಿಸಿಲಿನ ತಾಪ ತಾಳಲಾರದೆ ಆನೆಯೊಂದು ಹಾಸನ ಜಿಲ್ಲೆಯ ಸಕಲೇಶಪುರ ತಾಲೂಕಿನ ಯಳಸೂರು ಸಮೀಪದ ಹೊಸ್ಕೆರೆ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ಕೆಲಹೊತ್ತು ಆಟವಾಡಿ ಮೈಮನ ತಂಪು ಮಾಡಿಕೊಂಡು ಹೋಗಿರುವ ದೃಶ್ಯ ಕಂಡು ಬಂದಿತು.

elephant-swimming-in-hassan
ಹೇಮಾವತಿ ಹಿನ್ನೀರಿನಲ್ಲಿ ಹೆಣ್ಣಾನೆಯ ಸ್ವಿಮ್ಮಿಂಗ್​..!

By

Published : Feb 19, 2020, 6:19 AM IST

Updated : Feb 19, 2020, 3:15 PM IST

ಹಾಸನ: ಬಿಸಿಲಿನ ತಾಪ ತಾಳಲಾರದೆ ಆನೆಯೊಂದು ಸಕಲೇಶಪುರ ತಾಲೂಕಿನ ಯಳಸೂರು ಸಮೀಪದ ಹೊಸ್ಕೆರೆ ಗ್ರಾಮದ ಹೇಮಾವತಿ ಹಿನ್ನೀರಿನಲ್ಲಿ ಕೆಲಹೊತ್ತು ಆಟವಾಡಿ ಮೈಮನ ತಂಪು ಮಾಡಿಕೊಂಡಿತು.

ಹೇಮಾವತಿ ಹಿನ್ನೀರಿನಲ್ಲಿ ಹೆಣ್ಣಾನೆಯ ಜಲಕ್ರೀಡೆ
ಸಕಲೇಶಪುರ ತಾಲೂಕಿನ ಸುತ್ತಮುತ್ತ ಗ್ರಾಮಗಳಲ್ಲಿ ಆಗಾಗ ಹತ್ತಕ್ಕೂ ಹೆಚ್ಚು ಆನೆಗಳು ಕಾಣಿಸಿಕೊಳ್ಳುತ್ತಿವೆ. ಈ ಗುಂಪಿನಲ್ಲಿದ್ದ ಒಂಟಿ ಹೆಣ್ಣಾನೆಯೊಂದು ಬೇರ್ಪಟ್ಟು ಹೇಮಾವತಿಯ ಹಿನ್ನೀರಿನಲ್ಲಿ ಆಟವಾಡುತ್ತಿದೆ. ತಮ್ಮ ಬೆಳೆಗಳಿಗೆ ಹಾನಿ ಮಾಡಬಹುದೆಂದು ರೈತರು ಭಯಪಡುತ್ತಿದ್ದಾರೆ.
ಹೇಮಾವತಿ ಹಿನ್ನೀರಿನಲ್ಲಿ ಹೆಣ್ಣಾನೆಯ ಸ್ವಿಮ್ಮಿಂಗ್​..!

ಈ ಭಾಗದಲ್ಲಿ 60ಕ್ಕೂ ಅಧಿಕ ಆನೆಗಳು ಓಡಾಡುತ್ತಿವೆ. ಆನೆಗಳ ಸ್ಥಳಾಂತರಕ್ಕೆ ಆಗ್ರಹಿಸಲಾಗಿದೆ. ಕಳೆದ ಬಾರಿ ಬಜೆಟ್​ನಲ್ಲಿ ಹೆಚ್. ಡಿ. ಕುಮಾರಸ್ವಾಮಿ ಅವರು ರೈಲ್ವೆ ಕಂಬಿ ಬೇಲಿ ನಿರ್ಮಾಣಕ್ಕೆ 100 ಕೋಟಿ ರೂ. ಮೀಸಲಿಟ್ಟಿದ್ದರು. ಈ ಬಾರಿಯ ಬಜೆಟ್​ನಲ್ಲಿ ಹಣ ಬಿಡುಗಡೆ ಮಾಡಿದರೇ ವನ್ಯಜೀವಿ ಹಾಗೂ ಮಾನವ ಸಂಘರ್ಷ ಕಡಿಮೆಯಾಗುತ್ತದೆ ಎನ್ನುತ್ತಾರೆ ಸ್ಥಳೀಯರು.

Last Updated : Feb 19, 2020, 3:15 PM IST

ABOUT THE AUTHOR

...view details