ಕರ್ನಾಟಕ

karnataka

ETV Bharat / state

ಹೇ... ಅಲ್ನೋಡಿ ಆನೆ ಆನೆ: ಹುಣಸಿನಕೆರೆಗೆ ಬಂದ ಗಜರಾಜ - ಹಾಸನ

ಮುಂಜಾನೆ ನಗರದ ಸಮೀಪವಿರುವ ಹುಣಸಿನಕೆರೆ ಮಧ್ಯ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಆನೆ ನೋಡಿ ಸುತ್ತಮುತ್ತಲ ಜನ ಭಯಭೀತರಾಗುವ ಜೊತೆಗೆ ಆಶ್ಚರ್ಯದಿಂದ ಇದೇನಿದು ನಗರದ ಸಮೀಪಕ್ಕೆ ಆನೆ ಬಂದಿದೆಯಲ್ಲ ಎಂದು ಆನೆ ನೋಡಲು ಮುಗಿಬಿದ್ದರು.

ಹುಣಸಿನಕೆರೆಗೆ ಬಂದ ಗಜರಾಜ

By

Published : Jul 6, 2019, 8:32 PM IST

ಹಾಸನ:ಕಳೆದ ಹದಿನೈದು ದಿನಗಳ ಹಿಂದೆ ಸಾಲಗಾಮೆ ಸುತ್ತಮುತ್ತ ಒಂಟಿ ಸಲವೊಂದು ಕಾಣಿಸಿಕೊಂಡು ಓರ್ವ ಮಹಿಳೆಯನ್ನು ಬಲಿ ಪಡೆದು ಸಾರ್ವಜನಿಕರನ್ನು ಬೆಚ್ಚಿಬೀಳಿಸಿದ ಬೆನ್ನಲ್ಲೇ ಹುಣಸಿ‌ನಕೆರೆ ಮಧ್ಯ ಒಂಟಿ ಸಲಗ ಕಾಣಿಸಿಕೊಂಡಿದೆ.

ಹುಣಸಿನಕೆರೆಗೆ ಬಂದ ಗಜರಾಜ

ಮುಂಜಾನೆ ನಗರದ ಸಮೀಪವಿರುವ ಹುಣಸಿನಕೆರೆ ಮಧ್ಯ ಭಾಗದಲ್ಲಿ ಕಾಡಾನೆ ಕಾಣಿಸಿಕೊಂಡಿದೆ. ಆನೆ ನೋಡಿ ಸುತ್ತಮುತ್ತಲ ಜನ ಭಯಭೀತರಾಗುವ ಜೊತೆಗೆ ಆಶ್ಚರ್ಯದಿಂದ ಇದೇನಿದು ನಗರದ ಸಮೀಪಕ್ಕೆ ಆನೆ ಬಂದಿದೆಯಲ್ಲ ಎಂದು ಆನೆ ನೋಡಲು ಮುಗಿಬಿದ್ದರು.

ಆನೆಯು ಕೆರೆ ಆಳದಲ್ಲಿ ಮೋಜಿನಾಟದಲ್ಲಿ ತೊಡಗಿರುವುದನ್ನು ನೋಡಲು ಹುಣಸಿನಕೆರೆಯತ್ತ ಜನರ ದಂಡೇ ಹರಿದು ಬಂದಿತ್ತು. ಘಟನಾ ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಆನೆ ದಾಳಿ ಅಪಾಯದ ಹಿನ್ನೆಲೆಯಲ್ಲಿ ಸಾರ್ವಜನಿಕರನ್ನು ಸುರಕ್ಷಿತ ಸ್ಥಳದಲ್ಲಿ ಇರುವಂತೆ ಸೂಚಿಸುತ್ತಿದ್ದರೂ ಕೂಡ ಜನರ ಕುತೂಹಲ ಕಡಿಮೆಯಾಗುತ್ತಿರಲಿಲ್ಲ.

ಹದಿನೈದು ದಿನಗಳ ಹಿಂದಷ್ಟೆ ಬೇಲೂರು ತಾಲೂಕು ಹಗರೆ ಸಮೀಪ ಇದೇ ಆನೆ ಮಹಿಳೆಯೊಬ್ಬರನ್ನು ಹತ್ಯೆ ಮಾಡಿದ್ದು, ಅದೇ ಮಾರ್ಗವಾಗಿ ರಾತ್ರಿ ನಗರಕ್ಕೆ ಆನೆ ಬಂದಿದೆ ಎಂದು ಹೇಳಲಾಗಿದೆ. ಕೆರೆ ಒಳಗೆ ಆನೆಯ ಜಲ ಕ್ರೀಡೆಯನ್ನು ನೋಡಿ ಆನಂದಿಸಿದ ಸಾರ್ವಜನಿಕರು, ಮೊಬೈಲ್​​ನಲ್ಲಿ ಚಿತ್ರೀಕರಿಸಲು ಮುಂದಾದರು.

ಆಲೂರು ಭಾಗಗಳಲ್ಲಿ ಕಲ್ಲು ಗಣಿಗಾರಿಕೆ ನಡೆಸುತ್ತಿದ್ದು, ಮದ್ದು ಹೊಡೆಯುತ್ತಿರುವುದರಿಂದ ಶಬ್ದಕ್ಕೆ ಹೆದರಿ ಕಾಡು ಪ್ರಾಣಿಗಳೆಲ್ಲಾ ನಗರಕ್ಕೆ ಆಗಮಿಸುತ್ತಿವೆ. ಸದ್ಯ ನಗರದ ಸಮೀಪಕ್ಕೆ ಬಂದಿರುವ ಆನೆಯನ್ನು ಕೂಡಲೇ ಅರಣ್ಯ ಇಲಾಖೆಯವರು ಕಾಡಿಗೆ ಓಡಿಸಿ, ಜನರಿಗೆ ಆಗುತ್ತಿರುವ ಪ್ರಾಣಾಪಾಯವನ್ನು ತಪ್ಪಿಸುವಂತೆ ಸಾರ್ವಜನಿಕರು ಮನವಿ ಮಾಡಿದ್ದಾರೆ. ಸ್ಥಳಕ್ಕೆ ಕ್ಷೇತ್ರದ ಶಾಸಕ ಪ್ರೀತಂ ಜೆ. ಗೌಡ, ಅಪರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಂದಿನಿ, ಸಿಪಿಐ ಸತ್ಯನಾರಾಯಣ್ ಭೇಟಿ ನೀಡಿ ವೀಕ್ಷಿಸಿದರು. ಅರಣ್ಯ ಇಲಾಖಾ ಅಧಿಕಾರಿ ಡಿಸಿಎಫ್ ಶಿವರಾಮ್ ಬಾಬು, ಎಸಿಫ್ ಹರೀಶ್, ಆರ್‌ಎಫ್​ಓ ಜಗದೀಶ್ ಸ್ಥಳದಲ್ಲೇ ಇದ್ದು, ಪರಿಸ್ಥಿತಿ ಗಮನಿಸಿದ್ದಾರೆ.

ABOUT THE AUTHOR

...view details