ಕರ್ನಾಟಕ

karnataka

ETV Bharat / state

ಹಾಸನ: ಬಹಿರ್ದೆಸೆಗೆ ಹೋದಾಗ ಕಾಡಾನೆ ಕಂಡು ಮಕ್ಕಳಲ್ಲಿ ಆತಂಕ

ಬಹಿರ್ದೆಸೆಗೆಂದು ಮನೆಯಿಂದ ಹೊರಹೋದ ಮಕ್ಕಳು ಕಾಡಾನೆ ಕಂಡು ಗಾಬರಿಗೊಂಡ ಘಟನೆ ಹಾಸನ ಜಿಲ್ಲೆಯ ಸಕಲೇಶಪುರ ತಾಲ್ಲೂಕಿನ ಕಬ್ಬಿನಗದ್ದೆಯಲ್ಲಿ ನಡೆದಿದೆ.

Elephant enters a village in hassan district
ಹಾಸನ: ಶೌಚಾಲಯಕ್ಕೆ ಹೋಗ್ತಿದ್ದರ ಮುಂದೆ ಕಾಡಾನೆ ಪ್ರತ್ಯಕ್ಷ; ಬೆಚ್ಚಿಬಿದ್ದ ಮಕ್ಕಳು

By

Published : Sep 2, 2021, 2:50 PM IST

ಹಾಸನ: ಈಗಾಗಲೇ ಹಂತ ಹಂತವಾಗಿ ಶಾಲಾ-ಕಾಲೇಜುಗಳು ಪ್ರಾರಂಭವಾಗುತ್ತಿವೆ. ಈ ಮಧ್ಯೆ, ರಾಜ್ಯದ ಮಲೆನಾಡಿನಲ್ಲಿ ಕಾಡಾನೆ ಹಾವಳಿ ಮಕ್ಕಳಲ್ಲಿ ಆತಂಕ ಹೆಚ್ಚಿಸುತ್ತಿದೆ. ಬಹಿರ್ದೆಸೆಗೆ ಹೋಗುತ್ತಿದ್ದಾಗ ಸಮೀಪದಲ್ಲೇ ಕಾಡಾನೆ ಕಾಣಿಸಿರುವ ಘಟನೆ ಸಕಲೇಶಪುರದ ಕಬ್ಬಿನಗದ್ದೆ ಗ್ರಾಮದಲ್ಲಿ ನಡೆದಿದೆ.

ಹಾಸನದ ಕಬ್ಬಿನಗದ್ದೆ ಗ್ರಾಮದಲ್ಲಿ ಕಾಡಾನೆ ಪ್ರತ್ಯಕ್ಷ

ಇಂದು ಮುಂಜಾನೆ 7 ಗಂಟೆಯ ಸುಮಾರಿಗೆ ಮಕ್ಕಳು ಶಾಲೆಗೆ ಹೋಗುವ ಮುನ್ನ ನಿತ್ಯಕರ್ಮಗಳನ್ನು ಮುಗಿಸಲು ತೆರಳಿದ್ದರು. ಮನೆಯ ಬಾಗಿಲು ತೆರೆದ ತಕ್ಷಣ ಬಹಿರ್ದೆಸೆಗೆ ಹೋಗುವ ವೇಳೆ ಶೌಚಾಲಯದ ಪಕ್ಕದಲ್ಲೇ ದೊಡ್ಡ ಗಜರಾಜನನ್ನು ಕಂಡು ಮಕ್ಕಳು ಗಾಬರಿಗೊಂಡು ಪೋಷಕರಿಗೆ ತಿಳಿಸಿದ್ದಾರೆ.

ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ:

ತಕ್ಷಣ ಗ್ರಾಮಸ್ಥರೆಲ್ಲಾ ಸೇರಿ ಆನೆ ಓಡಿಸಲು ಮುಂದಾದರು. ಈ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ಮುಟ್ಟಿಸಿದರು. ಅರಣ್ಯಾಧಿಕಾರಿಗಳು ಸಕಾಲಕ್ಕೆ ಬಾರದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಆಲೂರು ಮತ್ತು ಸಕಲೇಶಪುರ ಭಾಗದಲ್ಲಿ ಕಾಡಾನೆಗಳ ಸಮಸ್ಯೆ ಇಂದು, ನಿನ್ನೆಯದಲ್ಲ. ದಶಕಗಳಿಂದಲೂ ಕೂಡ ಸಮಸ್ಯೆ ಕಣ್ಣೆದುರಿಗಿದ್ದರೂ 4-5 ಸರ್ಕಾರಗಳು ಬದಲಾವಣೆಯಾದರೂ ಕಾಡಾನೆಗಳ ಸಮಸ್ಯೆಗೆ ಶಾಶ್ವತ ಪರಿಹಾರ ಸಿಕ್ಕಿಲ್ಲ.

ABOUT THE AUTHOR

...view details