ಹಾಸನ: ಅನ್ನಭಾಗ್ಯದ ಗೋದಾಮಿನ ಮೇಲೆ ಆನೆ ದಾಳಿ ನಡೆಸಿರುವ ಘಟನೆ ಬೇಲೂರು ತಾಲೂಕಿನಲ್ಲಿ ನಡೆದಿದೆ. ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಗೋದಾಮಿನಲ್ಲಿ ಘಟನೆ ನಡೆದಿದೆ. ಆಹಾರ ಅರಸಿ ಕಾಡಿನಿಂದ ಈಗ ಆನೆಗಳು ನಾಡಿನತ್ತ ಬರುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.
ಸಕಲೇಶಪುರ ಆಲೂರು ಭಾಗದಲ್ಲಿದ್ದ ಆನೆ ಹಾವಳಿ ಈಗ ಅರೆಮಲೆನಾಡು ಭಾಗವಾಗಿರುವ ಬೇಲೂರು ತಾಲೂಕಿಗೂ ಬಂದಿದೆ. ಹಸಿದ ಆನೆಯೊಂದು ಅನುಘಟ್ಟ ಪ್ರಾಥಮಿಕ ಕೃಷಿ ಪತ್ತಿನ ಗೋದಾಮಿನ ಮೇಲೆ ದಾಳಿ ನಡೆಸಿದ್ದು ಅಪಾರ ಪ್ರಮಾಣದ ಅಕ್ಕಿ ಹಾಳುಗೆಡವಿದೆ. ಘಟನೆಯ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಹಾಗೂ ಬೇಲೂರು ಪೊಲೀಸ್ ಠಾಣಾ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.