ಕರ್ನಾಟಕ

karnataka

ETV Bharat / state

ರೈತನ ಮೇಲೆ ಕಾಡಾನೆ ದಾಳಿ: ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರು - ರೈತನ ಮೇಲೆ ಕಾಡಾನೆ ದಾಳಿ

ಹಾಸನ ಜಿಲ್ಲೆಯಲ್ಲಿ ಕಳೆದ ಒಂದು ವಾರದಿಂದ ಮತ್ತೆ ಕಾಡಾನೆಗಳ ದಾಳಿ ಹೆಚ್ಚಾಗುತ್ತಿದ್ದು, ರೈತನೋರ್ವ ಗಂಭೀರವಾಗಿ ಗಾಯಗೊಂಡಿದ್ದಾನೆ

Elephant attacks a farmer,ರೈತನ ಮೇಲೆ ಕಾಡಾನೆ ದಾಳಿ
ರೈತನ ಮೇಲೆ ಕಾಡಾನೆ ದಾಳಿ

By

Published : Jan 29, 2020, 4:33 AM IST

ಹಾಸನ:ರೈತನೋರ್ವನ ಮೇಲೆ ಆನೆ ದಾಳಿ ಮಾಡಿದ ಪರಿಣಾಮ ಗಂಭೀರವಾಗಿ ಗಾಯಗೊಂಡಿರುವ ಘಟನೆಜಿಲ್ಲೆಯ ಸಕಲೇಶಪುರ ತಾಲೂಕಿನಲ್ಲಿ ನಡೆದಿದೆ.

ಮಂಜುನಾಥ್ (38) ಗಾಯಗೊಂಡ ರೈತ. ಮಂಗಳವಾರ ಬೆಳಗ್ಗೆ ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಕಾಡಾನೆಯೊಂದು ದಾಳಿ ನಡೆಸಿದ್ದು, ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ರೈತನ ಮೇಲೆ ಕಾಡಾನೆ ದಾಳಿ

ವಿಷಯ ತಿಳಿದ ಗ್ರಾಮಸ್ಥರು ತಕ್ಷಣ ಕಾಡಾನೆಯನ್ನ ಓಡಿಸುವ ಪ್ರಯತ್ನ ಮಾಡಿದ್ದು, ಗಾಯಗೊಂಡ ಮಂಜುನಾಥರನ್ನ ಸಕಲೇಶಪುರದ ಕ್ರಾಫರ್ಡ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ಕಳೆದ ವಾರದಿಂದ ಕಾಡಾನೆಗಳ ಹಾವಳಿ ಹೆಚ್ಚಾಗುತ್ತಿದ್ದು, ಯಸಳೂರು, ಚಂಗಡಿಹಳ್ಳಿ, ಮುದ್ಲಾಪುರ, ದೊಡ್ಡಬೆಟ್ಟ ಭಾಗದಲ್ಲಿ ಜೀವವನ್ನ ಕೈಯಲ್ಲಿಡಿಕೊಂಡು ಓಡಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಈಗಾಗಲೇ ಆಲೂರು ಮತ್ತು ಸಕಲೇಶಪುರ ಭಾಗದಲ್ಲಿ ಹೈಕೋರ್ಟ್ ಮತ್ತು ಸುಪ್ರಿಂ ಕೋರ್ಟ್ ಆದೇಶದ ಪ್ರಕಾರ 40ಕ್ಕೂ ಹೆಚ್ಚು ಆನೆಗಳನ್ನ ಹಿಡಿದು ಸ್ಥಳಾಂತರ ಮಾಡಲಾಗಿದ್ದು, ಈ ಭಾಗದಲ್ಲಿ ಮತ್ತೆ 80ಕ್ಕೂ ಹೆಚ್ಚು ಕಾಡಾನೆಗಳು ಇವೆ ಎಂಬುದು ಸ್ಥಳೀಯರ ಆರೋಪವಾಗಿದೆ. ಇನ್ನು ಈ ಭಾಗದಲ್ಲಿನ ಮಕ್ಕಳನ್ನ ಶಾಲೆಗೆ ಕಳುಹಿಸುವುದಕ್ಕೂ ಭಯದ ವಾತಾವರಣವಿದ್ದು, ಅರಣ್ಯ ಇಲಾಖೆಯವರೆ ವಾಹನದ ವ್ಯವಸ್ಥೆ ಕಲ್ಪಿಸಬೇಕು ಎಂಬುದು ಕೆಲವು ಮಕ್ಕಳ ಪೋಷಕರು ಆಗ್ರಹಿಸಿದ್ದಾರೆ.

ಆನೆಗಳು ನಾಡಿಗೆ ಬಾರದಂತೆ ಕಾಡಂಚಿನ ಗಡಿಭಾಗಕ್ಕೆ ರೈಲ್ವೆ ಕಂಬಿಗಳನ್ನ ಅಳವಡಿಸುವ ಭರವಸೆಯನ್ನ ಹಿಂದಿನ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಬಜೆಟ್ ನಲ್ಲಿ ಪ್ರಸ್ತಾಪಿಸಿ 100ಕೋಟಿ ಅನುದಾನವನ್ನ ಮೀಸಲಿರಿಸಿದ್ದು, ಆ ಯೋಜನೆ ಸದ್ಯ ಹಳ್ಳಹಿಡಿದಿದೆ.

ABOUT THE AUTHOR

...view details