ಅರಕಲಗೂಡು (ಹಾಸನ): ಆನೆ ತುಳಿತಕ್ಕೆ ವ್ಯಕ್ತಿಯೋರ್ವ ಬಲಿಯಾಗಿರುವ ಘಟನೆ ತಾಲೂಕಿನಲ್ಲಿ ನಡೆದಿದೆ.
ಅರಕಲಗೂಡು: ಆನೆ ತುಳಿತಕ್ಕೆ ವ್ಯಕ್ತಿ ಬಲಿ - ಹಾಸನ ಲೇಟೆಸ್ಟ್ ನ್ಯೂಸ್
ಸೋಮವಾರಪೇಟೆಯಿಂದ ಸಂತೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವ್ಯಕ್ತಿ ಮೇಲೆ ಆನೆಯೊಂದು ದಾಳಿ ನಡೆಸಿದ್ದು, ಆತ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ರೇವಣ್ಣ (40) ಆನೆ ತುಳಿತಕ್ಕೆ ಒಳಗಾಗಿ ಮೃತಪಟ್ಟ ವ್ಯಕ್ತಿ. ಸೋಮವಾರಪೇಟೆಯಿಂದ ಸಂತೆ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದ ವೇಳೆ ಹಿಂಬದಿಯಿಂದ ಬಂದ ಆನೆಯೊಂದು ರೇವಣ್ಣನ ಮೇಲೆ ದಾಳಿ ನಡೆಸಿದೆ. ಹಿಂಬದಿಯ ಸವಾರ ಕೂದಲೆಳೆ ಅಂತರದಿಂದ ಆನೆಯಿಂದ ಬಚಾವ್ ಆಗಿದ್ದು, ರೇವಣ್ಣ ಆನೆ ತುಳಿತದಿಂದ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾನೆ.
ಮೃತನನ್ನು ಚಿಕ್ಕ ಬೊಮ್ಮನಹಳ್ಳಿಯ ರೇವಣ್ಣ ಎಂದು ಗುರುತಿಸಲಾಗಿದೆ. ಸ್ಥಳಕ್ಕೆ ಕೊಳಲೂರು ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಅರಕಲಗೂಡು ಶವಾಗಾರಕ್ಕೆ ರವಾನೆ ಮಾಡಲಾಗಿದೆ. ಈ ಸಂಬಂಧ ಕೊಣನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.