ಹಾಸನ: ಭಾರಿ ಮಳೆ ಮತ್ತು ಬಿರುಗಾಳಿಗೆ ಮರ, ವಿದ್ಯುತ್ ಕಂಬಗಳು ಧರೆಗುರುಳಿರುವ ಘಟನೆ ಜಿಲ್ಲೆಯ ಸಾಲಗಾಮೆ ಹೋಬಳಿಯಲ್ಲಿ ನಡೆದಿದೆ.
ಹಾಸನದಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬ - Seege-kadadaravalli Road
ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆ-ಕಡದರವಳ್ಳಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದ್ದು, ಎರಡು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು.
![ಹಾಸನದಲ್ಲಿ ಭಾರಿ ಮಳೆಗೆ ನೆಲಕ್ಕುರುಳಿದ ವಿದ್ಯುತ್ ಕಂಬ Electric polls fall due to heavy rains: Negligence of Chesscom officers](https://etvbharatimages.akamaized.net/etvbharat/prod-images/768-512-7311149-289-7311149-1590202503046.jpg)
ಹಾಸನ ತಾಲೂಕಿನ ಸಾಲಗಾಮೆ ಹೋಬಳಿಯ ಸೀಗೆ-ಕಡದರವಳ್ಳಿ ರಸ್ತೆಯಲ್ಲಿ ಮರವೊಂದು ಧರೆಗುರುಳಿದ್ದು, ಎರಡು ವಿದ್ಯುತ್ ಕಂಬಗಳು ಕೂಡ ಮುರಿದು ಬಿದ್ದ ಹಿನ್ನೆಲೆ ರಸ್ತೆ ಸಂಚಾರ ಅಸ್ತವ್ಯಸ್ತವಾಗಿತ್ತು. ವಿದ್ಯುತ್ ತಂತಿಗಳು ರಸ್ತೆಯಲ್ಲಿ ಹರಡಿಕೊಂಡು ಬಿದ್ದಿದ್ದರಿಂದ ವಾಹನ ಸವಾರರಿಗೆ, ಜನರಿಗೆ ಕೆಲಕಾಲ ಆತಂಕವಾಗಿತ್ತು.
ಘಟನಾ ಸಂಬಂಧ ಸ್ಥಳೀಯರ ಪಾತ್ರ ಇಲ್ಲಿ ನಿರ್ಣಾಯಕವಾಗಿತ್ತು. ಯಾಕಂದ್ರೆ ಸ್ಥಳೀಯರು ಸ್ವಇಚ್ಛೆಯಿಂದ ಸ್ಥಳದಲ್ಲೇ ನಿಂತು ಯಾವುದೇ ಅವಘಡ ಸಂಭವಿಸದಂತೆ ನೋಡಿಕೊಂಡರು. ಈ ದಾರಿಯ ಮೂಲಕ ಬರುವ ವಾಹನ ಸವಾರರಿಗೆ ಪರ್ಯಾಯ ಮಾರ್ಗದಲ್ಲಿ ಹೋಗುವಂತೆ ಸೂಚನೆ ನೀಡುತ್ತಿದ್ದರು. ಈ ಮಧ್ಯೆ ಘಟನೆ ನಡೆದ ಸ್ಥಳಕ್ಕೆ ಚೆಸ್ಕಾಂ ಅಧಿಕಾರಿಗಳು ಬಾರದಿದ್ದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದರು.