ಕರ್ನಾಟಕ

karnataka

ETV Bharat / state

ಕೃಷಿ ಪತ್ತಿನ ಸಹಕಾರ ಸಂಘದ ಎಲೆಕ್ಷನ್​​​ನಲ್ಲಿ ಕಳ್ಳ ಮತದಾನ: ಎಂಎಲ್​ಸಿ ಗೋಪಾಲಸ್ವಾಮಿ ಆರೋಪ - Election of Chennarayapatnam Agricultural Cooperative Society

ಸುಡಹಳ್ಳಿಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಸತ್ತಿರುವವರ ಹೆಸರಿನಲ್ಲೂ ಮತ ಹಾಕಿಸಿಕೊಳ್ಳಲಾಗಿದೆ ಎಂದು ಎಂಎಲ್​ಸಿ ಗೋಪಾಲಸ್ವಾಮಿ ಆರೋಪಿಸಿದ್ದಾರೆ.

Election of Primary Agricultural Cooperative Society in Hassan
ಎಂಎಲ್​ಸಿ ಗೋಪಾಲಸ್ವಾಮಿ

By

Published : Oct 1, 2020, 5:01 PM IST

ಚನ್ನರಾಯಪಟ್ಟಣ: ಸುಡಹಳ್ಳಿಯಲ್ಲಿ ನಡೆದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಚುನಾವಣೆಯಲ್ಲಿ ಕಳ್ಳ ಮತದಾನದ ಮೂಲಕ ಜೆಡಿಎಸ್ ಹನ್ನೊಂದು ಸ್ಥಾನಗಳನ್ನು ಗೆದ್ದಿದೆ ಎಂದು ಎಂಎಲ್​ಸಿ ಗೋಪಾಲಸ್ವಾಮಿ ಆರೋಪಿಸಿದ್ದಾರೆ.

ಎಂಎಲ್​ಸಿ ಗೋಪಾಲಸ್ವಾಮಿ

ಇಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸತ್ತಿರುವವರ ಹೆಸರಿನಲ್ಲೂ ಸಹ ಮತ ಹಾಕಿಸಿಕೊಂಡಿದ್ದಾರೆ. ಮಟ್ಟನವಿಲೆ ಸಿ.ಇ.ಓ ಇಲ್ಲಿಗೆ ಬಂದು ಐಡಿ ಕಾರ್ಡ್ ವಿತರಿಸಿ ಕಳ್ಳ ಮತಗಳನ್ನು ಹಾಕಿಸುತ್ತಿದ್ದಾನೆ. ಇದು ಎಷ್ಟರ ಮಟ್ಟಿಗೆ ಸರಿ? ಎಂದು ಪ್ರಶ್ನಿಸಿದರು. ಇದರ ಬಗ್ಗೆ ಸಮಗ್ರ ತನಿಖೆಯಾಗಬೇಕು. ಈ ವಿಚಾರಕ್ಕೆ ಸಂಬಂಧಪಟ್ಟಂತೆ ಅಧಿಕಾರಿಗಳಿಗೆ ದೂರು ಸಲ್ಲಿಸುತ್ತೇವೆ ಎಂದಿದ್ದಾರೆ.

ABOUT THE AUTHOR

...view details