ಕರ್ನಾಟಕ

karnataka

ETV Bharat / state

ಹಾಸನ ಕ್ಷೇತ್ರದಲ್ಲಿ ಎಜಾಸ್ ಅಹಮ್ಮದ್ ಫಾರೋಕಿ ಬಿಎಸ್‌ಪಿ ಅಭ್ಯರ್ಥಿ - undefined

ಹಾಸನ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ಎಜಾಸ್ ಅಹಮ್ಮದ್ ಫಾರೋಕಿ ಸ್ಪರ್ಧಿಸುತ್ತಿದ್ಧಾರೆ.

ಎಜಾಸ್ ಅಹಮ್ಮದ್ ಫಾರೋಕಿ

By

Published : Mar 20, 2019, 11:42 PM IST

ಹಾಸನ: ಲೋಕಸಭಾ ಚುನಾವಣೆಗೆ ಹಾಸನ ಕ್ಷೇತ್ರದಿಂದ ಬಹುಜನ ಸಮಾಜವಾದಿ ಪಕ್ಷದ ವತಿಯಿಂದ ಸ್ಪರ್ಧಿಸುತ್ತೇನೆ ಎಂದು ಎಜಾಸ್ ಅಹಮ್ಮದ್ ಫಾರೋಕಿ ತಿಳಿಸಿದರು.ನಗರದಲ್ಲಿ ಸುದ್ದಿಗೋಷ್ಠೀಯಲ್ಲಿ ಮಾತನಾಡಿದ ಅವರು, ಕೇಂದ್ರದ ನರೇಂದ್ರ ಮೋದಿ ನೇತತ್ವದ ಎನ್‌ಡಿಎ ಸರ್ಕಾರ ಉತ್ತಮ ಆಡಳಿತ ನೀಡುವಲ್ಲಿ ವಿಫಲವಾಗಿದೆ. ಮಾಯಾವತಿ ಅವರ ಬಿಎಸ್‌ಪಿ ಪಕ್ಷದಿಂದ ಮಾತ್ರ ಉತ್ತಮ ಆಡಳಿತ ಸಾಧ್ಯವಿದೆ. ಈ ಹಿನ್ನೆಲೆಯಲ್ಲಿ ಬಿಎಸ್‌ಪಿ ಬೆಂಬಲಿಸಬೇಕು ಎಂದು ಮನವಿ ಮಾಡಿದರು.

ಎಜಾಸ್ ಅಹಮ್ಮದ್ ಫಾರೋಕಿ

2004ರ ಲೋಕಸಭಾ ಚುನಾವಣೆಯಲ್ಲಿ 56 ಸಾವಿರ ಮತಗಳನ್ನು ಪಡೆದಿದ್ದೆ. ಮಾಯವತಿ ಉತ್ತಮ ಆಡಳಿತ ನೀಡುತ್ತಿದ್ದು, ಮುಂದಿನ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರದಲ್ಲಿದ್ದಾರೆ. ಅವರನ್ನು ಬೆಂಬಲಿಸಿ ಹಾಸನದಲ್ಲಿ ನಾನು ಸ್ಪರ್ಧಿಸುತ್ತಿರುವೆ. ವಿವಿಧ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಚುನಾವಣೆ ಮೈತ್ರಿ ಮೂಲಕ ಬೆಂಬಲಿಸುತ್ತಿವೆ. ಜಿಲ್ಲೆಯಲ್ಲೂ ದಲಿತ ಯುವ ಸಮುದಾಯ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ್ದು, ಈ ಚುನಾವಣೆಯಲ್ಲಿ ಮತಗಳಾಗಿ ಪರಿವರ್ತನೆ ಆಗಲಿದೆ. ಒಂದು ವೇಳೆ ಪಕ್ಷದಿಂದ ಅವಕಾಶ ದೊರೆಯದಿದ್ದರೆ ಪಕ್ಷೇತರನಾಗಿ ಸ್ಪರ್ಧಿಸಿ ಜನ ಸೇವೆಗೆ ಮುಂದಾಗುತ್ತೇನೆ ಎಂದು ಸ್ಪಷ್ಟಪಡಿಸಿದರು.

For All Latest Updates

TAGGED:

ABOUT THE AUTHOR

...view details