ಚನ್ನರಾಯಪಟ್ಟಣ: ಸರ್ಕಾರ ಗೋಹತ್ಯೆ ನಿಷೇಧ ಕಾಯ್ದೆಯನ್ನು ಜಾರಿಗೊಳಿಸಿದ ಪರಿಣಾಮ ತಾಲೂಕಿನ ಸಂತೆಯಲ್ಲಿ ದನಗಳನ್ನು ಕೊಂಡುಕೊಳ್ಳಲು ಯಾವೊಬ್ಬ ಗ್ರಾಹಕರು ಮುಂದೆ ಬರುತ್ತಿಲ್ಲ.
ಸಂತೆಯಲ್ಲಿ ಮಾರುವ ಉದ್ದೇಶದಿಂದ ಗಂಡು ಕರುಗಳನ್ನು ತಂದಿದ್ದ ವ್ಯಾಪಾರಸ್ಥರು ಖರೀದಿಯಾಗದ ಕಾರಣ ಸುಮಾರು 50ಕ್ಕೂ ಅಧಿಕ ಕರುಗಳನ್ನು ಎಪಿಎಂಸಿ ಆವರಣದಲ್ಲಿ ಬಿಟ್ಟು ಹೋಗಿದ್ದಾರೆ.
50 ಕರುಗಳನ್ನು ಬಿಟ್ಟು ಹೋದ ವ್ಯಾಪಾರಸ್ಥರು ಓದಿ:'ಬೆಂಗಳೂರಿಗೆ ಬಂದು ಕ್ರಾಂತಿ ಮಾಡುವುದರಲ್ಲಿ ಯಾವುದೇ ಸಂದೇಹವಿಲ್ಲ'
ಇದನ್ನು ಗಮನಿಸಿದ ರೈತ, ಕಾರ್ಮಿಕ ಮತ್ತು ದಲಿತ ಸಂಘಟನೆಯ ಕಾರ್ಯಕರ್ತರು ಇವುಗಳನ್ನು ತಾಲೂಕು ತಹಶೀಲ್ದಾರರ ಕಚೇರಿ ಬಳಿ ತಂದು ಇವುಗಳಿಗೆ ಪರ್ಯಾಯ ವ್ಯವಸ್ಥೆ ಮಾಡುವಂತೆ ಒತ್ತಾಯಿಸಿದರು. ಕೊನೆಗೂ ಇವರ ಒತ್ತಾಯಕ್ಕೆ ಮಣಿದ ತಾಲೂಕಿನ ತಹಶೀಲ್ದಾರ್ ಮಾರುತಿ ಗೌಡ, ಇವುಗಳಿಗೆ ಚಿಕಿತ್ಸೆ ನೀಡಿ ನಂತರ ಮೈಸೂರಿನಲ್ಲಿರುವ ಗೋಶಾಲೆಗೆ ಸಾಗಿಸುತ್ತೇವೆ ಎಂದು ತಿಳಿಸಿದ್ದಾರೆ.