ಕರ್ನಾಟಕ

karnataka

ETV Bharat / state

ತಾತ.. ತಾತ.. ಸ್ಕೂಲ್ ಯಾವಾಗ ಓಪನ್ ಮಾಡ್ತೀರಾ.. ಮಗುವಿನೊಂದಿಗೆ ಮಗುವಾದ ಶಿಕ್ಷಣ ಸಚಿವರು - hasuresh kumar news

ಶೃಂಗೇರಿಯಿಂದ ತಿಪಟೂರಿಗೆ ಹೋಗುವ ಮಾರ್ಗ ಮಧ್ಯೆ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ ಶಿಕ್ಷಣ ಸಚಿವರು ಕೆಲಹೊತ್ತು ಮಕ್ಕಳ ಜೊತೆ ಮಾತನಾಡಿದ್ದು ವಿಶೇಷವಾಗಿತ್ತು.

Education minister reaction to baby question
ಮಗುವಿನೊಂದಿಗೆ ಮಗುವಾದ ಶಿಕ್ಷಣ ಸಚಿವರು

By

Published : Aug 30, 2021, 1:56 PM IST

ಹಾಸನ/ಅರಸೀಕೆರೆ:ತಾತ.. ತಾತ.. ಸ್ಕೂಲ್ ಯಾವಾಗ ಓಪನ್ ಮಾಡ್ತೀರಾ?

ಯಾವಾಗ ಓಪನ್ ಮಾಡಬೇಕು. . ?

ನಾಳೆ. . ?

ಆಯ್ತು ಓಪನ್ ಮಾಡೋಣ....

ಹೌದು, ಈ ಸಂಭಾಷಣೆ ನಡೆದಿದ್ದು, ಶಿಕ್ಷಣ ಸಚಿವರು ಹಾಗೂ ಪುಟ್ಟ ಮಗುವಿನ ನಡುವೆ. ಪುಟ್ಟ ಮಗುವಿನ ಮಾತಿಗೆ ಮಗುವಿನ ರೀತಿಯಲ್ಲಿಯೇ ಉತ್ತರ ನೀಡುತ್ತಾ ಸ್ವಲ್ಪ ಹೊತ್ತು ಮಕ್ಕಳೊಂದಿಗೆ ಶಿಕ್ಷಣ ಸಚಿವರು ಸಮಯ ಕಳೆದಿದ್ದಾರೆ. ಶೃಂಗೇರಿಯಿಂದ ತಿಪಟೂರಿಗೆ ಹೋಗುವ ಮಾರ್ಗ ಮಧ್ಯೆ ತಮ್ಮ ಸಂಬಂಧಿಕರ ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಸಚಿವರು ಪುಟ್ಟ ಮಗುವಿನ ಮಾತಿಗೆ ಅಷ್ಟೇ ಮುಗ್ಧತೆಯಿಂದ ಸ್ಪಂದಿಸಿದ್ದಾರೆ.

ಮಗುವಿನೊಂದಿಗೆ ಮಗುವಾದ ಶಿಕ್ಷಣ ಸಚಿವರು

ಕಾರಿನಿಂದ ಇಳಿದು ಮನೆಗೆ ಬಂದು ಕಾಫಿ ಸವಿಯುವ ವೇಳೆ ಶಿಕ್ಷಣ ಸಚಿವರ ಬಳಿಗೆ ಓಡಿಬಂದ ಪುಟ್ಟ ಮಗು, ತಾತ ತಾತ ಸ್ಕೂಲ್ ಯಾವತ್ತು ಓಪನ್ ಮಾಡ್ತೀರಾ ಎಂಬ ಪ್ರಶ್ನೆಯನ್ನು ಕೇಳಿದೆ.

ABOUT THE AUTHOR

...view details