ಹಾಸನ :ಜಿಲ್ಲೆಯ ಬೇಲೂರು ತಾಲೂಕಿನ ಹಳೇಬೀಡು ಹೋಬಳಿಯ ವಿವಿಧ ಗ್ರಾಮಗಳಲ್ಲಿ ಲಘುವಾಗಿ ಭೂಕಂಪವಾಗಿರುವ ಬಗ್ಗೆ ವರದಿಯಾಗಿದೆ. ತಾಲೂಕಿನ ಘಟ್ಟದಹಳ್ಳಿ ಮತ್ತು ಚಟ್ಟಚಟ್ಟಹಳ್ಳಿಯ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಬರುವ ಮಾಯಗೊಂಡನಹಳ್ಳಿ, ದ್ಯಾವಪ್ಪನಹಳ್ಳಿ, ಲಿಂಗಪ್ಪನಕೊಪ್ಪಲು, ಮಹಮದ್ ಪುರ ಹಾಗೂ ಮಾಚೇನಹಳ್ಳಿ ಗ್ರಾಮಗಳಲ್ಲಿ ಲಘುವಾಗಿ ಭೂಕಂಪವಾದ ಬಗ್ಗೆ ವರದಿಯಾಗಿದೆ.
ದ್ಯಾವಪ್ಪನಹಳ್ಳಿಯ ರಂಗಸ್ವಾಮಿ ಎಂಬುವರ ಮನೆಯಲ್ಲಿ ಸಂಜೆ ಸುಮಾರು 5-28ರ ಸಮಯದಲ್ಲಿ ಅಡುಗೆಮನೆಯಲ್ಲಿದ್ದ ಪಾತ್ರೆಗಳು ಕೆಳಗೆ ಬಿದ್ದಿದ್ದವು. ತಕ್ಷಣ ಮನೆಯಿಂದ ಹೊರಕ್ಕೆ ಬಂದಾಗ ಹಳ್ಳಿ ತುಂಬ ಸುದ್ದಿಯಾಗಿತ್ತು. ಈ ಭಾಗದ ಗ್ರಾಮಸ್ಥರು ಭಯ ಭೀತರಾಗಿದ್ದಾರೆ.