ಕರ್ನಾಟಕ

karnataka

ETV Bharat / state

ಕಾರ್ಮಿಕರ ಕೆಲಸದ ಅವಧಿ ಹೆಚ್ಚಿಸಿದ್ದು ಖಂಡನೀಯ : ಡಿವೈಎಫ್​ಐ ಪ್ರತಿಭಟನೆ - latest news for dyfi

ನಗರದ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪ್ರತಿಭಟನೆ ನಡೆಸಿದ ಡಿವೈಎಫ್​ಐ ಸಂಘಟನೆ ಸದಸ್ಯರು, ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಿರುವುದು ಖಂಡನೀಯ, ಇದು 1948 ರ ಕಾರ್ಖಾನೆ ಕಾಯ್ದೆಯ ಕಲಂ 51 ಮತ್ತು 54 ಕ್ಕೆ ವಿರುದ್ದವಾಗಿದೆ ಎಂದು ದೂರಿದರು.

DYFI Protest
ಡಿವೈಎಫ್​ಐ ಪ್ರತಿಭಟನೆ

By

Published : May 29, 2020, 8:01 PM IST

ಹಾಸನ : ಕೆಲಸದ ಅವಧಿಯನ್ನು 6 ಗಂಟೆಗೆ ಇಳಿಸಿ, ಯುವ ಜನರಿಗೆ ಉದ್ಯೋಗ ನೀಡಿ ಮತ್ತು ರಾಜ್ಯದ ಅಭಿವೃದ್ಧಿಗೆ ಕ್ರಮ ವಹಿಸಬೇಕೆಂದು ಆಗ್ರಹಿಸಿ ಡಿವೈಎಫ್​ಐ ಸಂಘಟನೆ ಸದಸ್ಯರು ಪ್ರತಿಭಟನೆ ನಡೆಸಿದರು.

ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿರುವ ಡಾ. ಬಿ.ಆರ್. ಅಂಬೇಡ್ಕರ್ ಪ್ರತಿಮೆ ಎದುರು ಪ್ರತಿಭಟನೆ ನಡೆಸಿದ ಸದಸ್ಯರು, ಕಾರ್ಮಿಕರ ಕೆಲಸದ ಅವಧಿಯನ್ನು 8 ಗಂಟೆಯಿಂದ 10 ಗಂಟೆಗೆ ಏರಿಸಿರುವುದು ಖಂಡನೀಯ, ಇದು 1948 ರ ಕಾರ್ಖಾನೆ ಕಾಯ್ದೆಯ ಕಲಂ 51 ಮತ್ತು 54 ಕ್ಕೆ ವಿರುದ್ದವಾದವು ಎಂದು ದೂರಿದರು.

ಕಾರ್ಮಿಕರ ವಿಶ್ರಾಂತಿ ಸಮಯವನ್ನು ಕಡಿತಗೊಳಿಸಿರುವುದು ಸರಿಯಾದ ಕ್ರಮವಲ್ಲ, ನಿರುದ್ಯೋಗಿಗಳಿಗೆ ಉದ್ಯೋಗ ಕಲ್ಪಿಸುವಲ್ಲಿ ಸರ್ಕಾರ ವಿಫಲವಾಗಿದೆ, ನಿರುದ್ಯೋಗಿಗಳಿಗೆ ಉದ್ಯೋಗ ಸೃಷ್ಟಿಸಿ ಎಂದು ಆಗ್ರಹಿಸಿದ್ದರು.

ಡಿವೈಎಫ್​ಐ ಪ್ರತಿಭಟನೆ

ಜನಸಾಮಾನ್ಯರು ಹಾಗೂ ದುಡಿಯುವ ವರ್ಗ ದೇಶದಾದ್ಯಂತ ಕೊರೊನಾ ವಿರುದ್ದದ ಹೋರಾಟದಲ್ಲಿ ಸಂಕಷ್ಠದಲ್ಲಿದೆ. ಇಂಥಹ ಸಂದರ್ಭದಲ್ಲಿ ಸರ್ಕಾರ ಜಾಗತಿಕ ಕಾರ್ಮಿಕ ವರ್ಗದ 8 ಗಂಟೆಯ ಕೆಲಸದ ಹಕ್ಕನ್ನು ಗೌರವಿಸುವ ಬದಲು, ರಾಜ್ಯದ ಕಾರ್ಮಿಕರಿಂದ ಅದನ್ನು ಕಸಿದುಕೊಳ್ಳಲು ಹೊರಟಿರುವುದು ಖಂಡನೀಯ ಎಂದು ಆಕ್ರೋಶ ಹೊರ ಹಾಕಿದರು.

ABOUT THE AUTHOR

...view details