ಹಾಸನ: ಕೋವಿಡ್ ಇರುವುದರಿಂದ ಈ ಬಾರಿ ಹಾಸನದ ಅಧಿದೇವತೆ ಹಾಸನಾಂಬೆ ದರ್ಶನಕ್ಕೆ ಭಕ್ತರಿಗೆ ನಿರ್ಬಂಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಆರ್ ಗಿರೀಶ್ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಾಸನಾಂಬೆ ದೇವಾಲಯದ ಬಾಗಿಲು ನವೆಂಬರ್ 5 ರಿಂದ 17ರವರೆಗೆ ತೆರೆಯಲಿದೆ. ಕೊರೊನಾ ಹಿನ್ನೆಲೆ ಪ್ರಾಥಮಿಕ ಸಭೆ ನಡೆಸಿ ದರ್ಶನದ ಬಗ್ಗೆ ಯಾವ ಕ್ರಮಗಳನ್ನು ಅನುಸರಿಸಬೇಕು ಎಂದು ಚರ್ಚಿಸಲಾಗಿದೆ. ಹಾಸನದಲ್ಲಿ ಕೋವಿಡ್ ವ್ಯಾಪಕವಾಗಿ ಹರಡುತ್ತಿರೋ ಹಿನ್ನೆಲೆ ಜನ ಸೇರುವುದನ್ನು ನಿಷೇಧಿಸಿರುವುದರಿಂದ ಜನಜಂಗುಳಿ ಆಗದಂತೆ ಆಚರಿಸುವುದು ಕಷ್ಟಸಾಧ್ಯ. ವಿಧಿವಿಧಾನಗಳ ಪ್ರಕಾರ ಈ ಬಾರಿ ಮೊದಲ ಹಾಗೂ ಕೊನೆಯ ದಿನ ಮಾತ್ರ ಸರಳ ಕಾರ್ಯಕ್ರಮ ನಡೆಸಲಾಗುವುದು ಹಾಗೂ ಇನ್ನುಳಿದ ದಿನಗಳಲ್ಲಿ ನಡೆಯಬೇಕಾದ ಪೂಜಾ ವಿಧಿ ವಿಧಾನಗಳ ಪ್ರಕಾರ ಕಾರ್ಯಕ್ರಮ ನಡೆಯುವುದು ಎಂದು ತಿಳಿಸಿದರು.