ಹಾಸನ:ಅಕ್ರಮವಾಗಿ ಉಡುಪಿಯಿಂದ ಹಾಸನಕ್ಕೆ ಮಾದಕ ವಸ್ತು ಸಾಗಾಣಿಕೆ ಮಾಡುತ್ತಿದ್ದ ವ್ಯಕ್ತಿಯೋರ್ವನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಬಂಧಿತನು ಕೆಎಸ್ಆರ್ಟಿಸಿ ಬಸ್ ಮೂಲಕ ಉಡುಪಿಯಿಂದ ಹಾಸನಕ್ಕೆ ಸುಮಾರು ಎರಡು ಬಾಕ್ಸ್ಗಳಲ್ಲಿ ತಲಾ ನೂರು ಬಾಟಲ್ಗಳಂತೆ ಬ್ಯಾನ್ ಆಗಿರುವ ಔಷಧಿ ಬಾಟಲ್ಗಳನ್ನು ನೇರವಾಗಿ ಸ್ಥಳೀಯ ಮಾದಕ ವ್ಯಸನಿಗಳಿಗೆ ಮಾರಾಟ ಮಾಡುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಹಾಸನ ನಗರ ವೃತ್ತ ನಿರೀಕ್ಷಕ ಕೃಷ್ಣರಾಜ ಮತ್ತು ಅವರ ತಂಡ ಬಸ್ ನಿಲ್ದಾಣದಲ್ಲಿ ಆರೋಪಿ ಸಚಿನ್ ಎಂಬುವನನ್ನು ವಶಕ್ಕೆ ಪಡೆದು ಮಾರಾಟ ಮಾಡಲು ತಂದಿದ್ದ ಔಷಧಿ ಬಾಟಲಿ (ನಿಷೇಧವಾಗಿರುವ)ಗಳನ್ನು ವಶಪಡಿಸಿಕೊಂಡಿದ್ದಾರೆ.