ಕರ್ನಾಟಕ

karnataka

ETV Bharat / state

ಹಾಸನದಲ್ಲಿ ಡ್ರೋನ್​ ಟೆಕ್ನಾಲಜಿ ಮೂಲಕ ಜಮೀನು ಸರ್ವೆ ಕಾರ್ಯ - ಡ್ರೋನ್​​ ಮೂಲಕ ಜನವಸತಿ ಪ್ರದೇಶದ ಫೋಟೊಗ್ರಫಿಕ್ ಇಮೇಜ್

ಹಾಸನದಲ್ಲಿ ಆಧುನಿಕ ತಂತ್ರಜ್ಞಾನವಾದ ಡ್ರೋನ್​ ಮೂಲಕ ಹತ್ತಕ್ಕಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಸರ್ವೆ ಕೆಲಸ ಮಾಡಲಾಗುತ್ತಿದೆ. ಈ ಅತ್ಯಾಧುನಿಕ ಡ್ರೋನ್​​ ಮೂಲಕ ದಿನಕ್ಕೆ 5 ರಿಂದ 8 ಹಳ್ಳಿ ಸರ್ವೆ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋನ್​​ ಮೂಲಕ ಕೇವಲ ಐದು ಗಂಟೆಯಲ್ಲಿ ಮಾಡಬಹುದಾಗಿದೆ.

drone technology for land surveying and mapping in hassan
ಡ್ರೋನ್​ ಮೂಲಕ ಸರ್ವೆ ಕಾರ್ಯ

By

Published : Oct 30, 2020, 5:19 PM IST

ಹಾಸನ: ಹತ್ತಕ್ಕಿಂತ ಹೆಚ್ಚು ಜನವಸತಿ ಇರುವ ಜಾಗದಲ್ಲಿ ಆಧುನಿಕ ಡ್ರೋನ್​ ತಂತ್ರಜ್ಞಾನ ಬಳಸಿ ಸರ್ವೆ ಕೆಲಸ ಮಾಡಲಾಗುತ್ತಿದೆ.

ಡ್ರೋನ್​ ಮೂಲಕ ಸರ್ವೆ ಕಾರ್ಯ


ಆರ್‌ಡಿಪಿಆರ್ ಇಲಾಖೆ, ರೆವಿನ್ಯೂ ಇಲಾಖೆ, ಸರ್ವೆ ಆಫ್ ಇಂಡಿಯಾ ಈ ಮೂರು ಇಲಾಖೆಗಳ ಸಹಭಾಗಿತ್ವದೊಂದಿಗೆ ಹಾಸನದಲ್ಲಿ ಡ್ರೋನ್​ ಉಪಕರಣದ ಮೂಲಕ ಸರ್ವೆ ಕಾರ್ಯ ನಡೆಸಲಾಗುತ್ತಿದೆ. ಡ್ರೋನ್​​ ಮೂಲಕ ಜನವಸತಿ ಪ್ರದೇಶದ ಫೋಟೋಗ್ರಫಿಕ್ ಇಮೇಜ್ ತೆಗೆದುಕೊಂಡು ನಕ್ಷೆ ತಯಾರಿಸಲಾಗುತ್ತೆ. ನಂತರ ಪ್ರಾಪರ್ಟಿ ಕಾರ್ಡ್ ಜನರೇಟ್ ಮಾಡ್ತಾರೆ. ಅದನ್ನು ಜನರಿಗೆ ನೀಡಲಾಗುತ್ತದೆ. ಇದು ಕೇಂದ್ರ ಸರ್ಕಾರದ ಯೋಜನೆಯಾಗಿದ್ದು, ಸಾರ್ವಜನಿಕರಿಗೆ ಹೆಚ್ಚು ಪ್ರಯೋಜನಕಾರಿಯಾಗಿದೆ.

ಈ ಪ್ರಾಪರ್ಟಿ ಕಾರ್ಡನ್ನು ಪುನರ್​ ಪರಿಶೀಲನೆ ಮಾಡಿ ಏನಾದ್ರೂ ಸಮಸ್ಯೆ ಇದ್ದರೆ ಸರಿಪಡಿಸಲಾಗುತ್ತೆ. ಇದರಿಂದಾಗಿ ಸಾರ್ವಜನಿಕರಿಗೆ ಅವರ ಒಡೆತನದ ಭೂಮಿಯ ನಕ್ಷೆ ಮತ್ತು ದಾಖಲಾತಿ ಒಂದೇ ಕಾರ್ಡ್‌ನಲ್ಲಿ ಸಿಗಲಿದ್ದು, ಇದರಿಂದ ವಿಭಾಗ ಮಾಡಿಕೊಳ್ಳುವಾಗ, ಬ್ಯಾಂಕ್‌ ಸಾಲ ಪಡೆಯುವಾಗ ಒಂದೇ ಕಾರ್ಡ್‌ನಲ್ಲಿ ಎಲ್ಲ ಮಾಹಿತಿ ಸಿಗಲಿದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಭೂದಾಖಲೆಗಳ ಉಪನಿರ್ದೇಶಕಿ ಹೇಮಲತಾ ಮನವಿ ಮಾಡಿದ್ದಾರೆ.

ಈ ಅತ್ಯಾಧುನಿಕ ಡ್ರೋನ್​​ ಮೂಲಕ ದಿನಕ್ಕೆ 5 ರಿಂದ 8 ಹಳ್ಳಿ ಸರ್ವೆ ಮಾಡಿ ಮುಗಿಸಬಹುದು. 10 ರಿಂದ 15 ದಿನದಲ್ಲಿ ಮಾಡಬಹುದಾದ ಕೆಲಸವನ್ನು ಡ್ರೋನ್​​ ಮೂಲಕ ಕೇವಲ ಐದು ಗಂಟೆಯಲ್ಲಿ ಮಾಡಬಹುದು. ಅರ್ಧ ಗಂಟೆಯಲ್ಲಿ ಸುಮಾರು 2 ಸಾವಿರ ಎಕರೆಯಷ್ಟು ಭೂಮಿಯನ್ನು ಸರ್ವೆ ಮಾಡಬಹುದಾಗಿದೆ ಎಂದು ಮಾಹಿತಿ ನೀಡಿದರು.

ಹವಾಮಾನ ವ್ಯತ್ಯಾಸ ಇದ್ದಾಗ ಡ್ರೋನ್​​ ಹಾರಿಸಿ ಸರ್ವೆ ಮಾಡಲು ಸಾಧ್ಯ ಆಗಲ್ಲ. ಡ್ರೋನ್​​ ಸರ್ವೆ ನಂತರ ಗ್ರಾಮ ಪಂಚಾಯತ್​ನಲ್ಲಿರುವ ದಾಖಲೆ, ಆನ್‌ಗ್ರೌಂಡ್ ದಾಖಲೆ ಎಲ್ಲವನ್ನೂ ಪರಿಶೀಲನೆ ನಡೆಸಿ ನಂತರ ಪ್ರಾಪರ್ಟಿ ಕಾರ್ಡ್ ವಿತರಿಸಲಾಗುತ್ತೆ. ಹಾಸನದಲ್ಲಿ ಇನ್ನೂ ಐದಾರು ತಿಂಗಳು ಡ್ರೋನ್​​ ಸರ್ವೆ ಕಾರ್ಯ ನಡೆಯಲಿದೆ ಎಂದು ತಿಳಿಸಿದ್ದಾರೆ.

ABOUT THE AUTHOR

...view details