ಹಾಸನ: ಚಾಲಕನ ಅಜಾಗರೂಕತೆಯಿಂದ ಲಾರಿ ಮನೆಗೆ ಡಿಕ್ಕಿ ಹೊಡೆದಿರುವ ಘಟನೆ ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನಲ್ಲಿ ನಡೆದಿದೆ.
ತಾಲೂಕಿನ ಮೂಡನಹಳ್ಳಿ ಗೇಟ್ ಬಳಿ ಇರುವ ಮನೆಗೆ ಲಾರಿ ಗುದ್ದಿದೆ. ಘಟನೆಯಿಂದ ಮನೆಯಲ್ಲಿದ್ದ ತಾಯಿ-ಮಗಳು ಕೂದಲೆಳೆಯಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಬೆಳಗಿನ ಜಾವ ಟೀ ಕುಡಿಯಲು ಚಾಲಕ ಲಾರಿಯನ್ನು ನಿಲ್ಲಿಸಿ ಹ್ಯಾಂಡ್ ಬ್ರೇಕ್ ಹಾಕದ ಹಿನ್ನೆಲೆಯಲ್ಲಿ ಇಂತಹದೊಂದು ಘಟನೆ ಸಂಭವಿಸಿದೆ. ಇನ್ನು ಲಾರಿ ಗುದ್ದಿದ ರಭಸಕ್ಕೆ ಮನೆ ಸಂಪೂರ್ಣ ಜಖಂ ಆಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.
ಘಟನೆ ಸಂಬಂಧ ಚೆನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಚಾಲಕ ಹಾಗೂ ಲಾರಿಯನ್ನು ವಶಕ್ಕೆ ಪಡೆದು ತನಿಖೆ ಮುಂದುವರಿಸಿದ್ದಾರೆ.