ಕರ್ನಾಟಕ

karnataka

ETV Bharat / state

ಹೇಮಾವತಿ ಹೊಳೆ ದಂಡೆ ಮೇಲಿರುವ ಕುಡಿಯುವ ನೀರಿನ ಘಟಕ ಶುಚೀಕರಣ - Drinking water unit cleaning

ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಹೇಮಾವತಿ ಹೊಳೆ ದಂಡೆ ಮೇಲಿರುವ ಶುದ್ಧೀಕರಣ ಘಟಕದಲ್ಲಿ ಶುಚಿತ್ವ ಕಾರ್ಯವನ್ನು ಆಗಾಗ್ಗೆ ಕೈಗೊಳ್ಳಲಾಗುತ್ತಿದೆ. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಪಾಲಿ ಅಲ್ಯುಮಿನಿ ಕೆಮಿಕಲ್ ದ್ರಾವಣ ಮೂಲಕ ಸ್ವಚ್ಚಗೊಳಿಸಲಾಗುತ್ತಿದೆ.

Drinking water unit cleaning
ಹೇಮಾವತಿ ಹೊಳೆ ದಂಡೆ ಮೇಲಿರುವ ಶುದ್ಧ ಕುಡಿಯುವ ನೀರಿನ ಘಟಕ ಶುಚೀಕರಣ

By

Published : Apr 23, 2020, 5:40 PM IST

Updated : Apr 23, 2020, 7:36 PM IST

ಅರಕಲಗೂಡು:ತಾಲೂಕಿನ ಹೇಮಾವತಿ ಹೊಳೆ ದಂಡೆ ಮೇಲಿರುವ ಶುದ್ಧ ಕುಡಿವ ನೀರಿನ ಘಟಕವನ್ನು ಇಂದು ಪಟ್ಟಣ ಪಂಚಾಯಿತಿ ವತಿಯಿಂದ ಶುಚಿಗೊಳಿಸಲಾಯಿತು.

ಹೇಮಾವತಿ ಹೊಳೆ ದಂಡೆ ಮೇಲಿರುವ ಶುದ್ಧ ಕುಡಿಯುವ ನೀರಿನ ಘಟಕ ಶುಚೀಕರಣ..


ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸುರೇಶ್ ಬಾಬು ಮಾತನಾಡಿ, ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಶುದ್ಧೀಕರಣ ಘಟಕದಲ್ಲಿ ಶುಚಿತ್ವ ಕಾರ್ಯವನ್ನು ಆಗಾಗ್ಗೆ ಕೈಗೊಳ್ಳಲಾಗುತ್ತಿದೆ. ಇದೀಗ ಕೊರೊನಾ ಹಿನ್ನೆಲೆಯಲ್ಲಿ ಪಾಲಿ ಅಲ್ಯುಮಿನಿ ಕೆಮಿಕಲ್ ದ್ರಾವಣ ಮೂಲಕ ಸ್ವಚ್ಚಗೊಳಿಸಲಾಗುತ್ತಿದೆ. ಪಟ್ಟಣದ ಎಲ್ಲ ವಾರ್ಡ್​​​ ಗಳಲ್ಲಿಯೂ ಸ್ವಚ್ಚತೆ ಕಾಪಾಡಲಾಗುತ್ತಿದೆ ಎಂದರು.

ಹೇಮಾವತಿ ಹೊಳೆ ದಂಡೆ ಮೇಲಿರುವ ಶುದ್ಧ ಕುಡಿಯುವ ನೀರಿನ ಘಟಕ ಶುಚೀಕರಣ


ತಹಶೀಲ್ದಾರ್ ವೈ.ಎಂ. ರೇಣುಕುಮಾರ್ ಮಾತನಾಡಿ, ಹೇಮಾವತಿ ಹೊಳೆಯಿಂದ ನೇರವಾಗಿ ಬರುವ ನೀರನ್ನು ಶುದ್ಧೀಕರಿಸಿ ಪಟ್ಟಣದಲ್ಲಿ ನಿರ್ಮಿಸಿರುವ 5 ಟ್ಯಾಂಕ್‌ಗಳಿಗೆ ತುಂಬಿಸಿ ನಂತರ ಮನೆ ಮನೆಗಳಿಗೆ ಕುಡಿಯಲು ಪೂರೈಸಲಾಗುತ್ತಿದೆ. ಸಾರ್ವಜನಿಕರು ಕುಡಿಯುವ ನೀರು ಪೋಲಾಗದಂತೆ ಹೆಚ್ಚು ನಿಗಾ ವಹಿಸಬೇಕು ಎಂದು ತಿಳಿಸಿದರು.

Last Updated : Apr 23, 2020, 7:36 PM IST

ABOUT THE AUTHOR

...view details