ಕರ್ನಾಟಕ

karnataka

ETV Bharat / state

ದಲಿತ ಯುವಕನ ಕೊಲೆ ಪ್ರಕರಣ: ಅರೋಪಿಯನ್ನು ಬಂಧಿಸುವಂತೆ ಆಗ್ರಹಿಸಿ ಪ್ರತಿಭಟನೆ - Dravidian Bhim Army

ದಲಿತ ಯುವಕ ಅನಿಲ್​ನನ್ನು ಕೊಲೆಗೈದ ಅರೋಪಿಯನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿ ದ್ರಾವಿಡ ಭೀಮಾ ಆರ್ಮಿಯಿಂದ ಪ್ರತಿಭಟನೆ ನಡೆಸಲಾಯಿತು.

Protest in Hassan
ದ್ರಾವಿಡ ಭೀಮಾ ಆರ್ಮಿಯಿಂದ ಪ್ರತಿಭಟನೆ

By

Published : Sep 1, 2020, 12:34 PM IST

ಹಾಸನ: ದಲಿತ ಯುವಕ ದೇವಸ್ಥಾನದಲ್ಲಿ ಸಮನಾಗಿ ಕುಳಿತ ಎಂಬ ಕಾರಣಕ್ಕೆ ಕೊಲೆಗೈದ ಅರೋಪಿಯನ್ನು ಕೂಡಲೇ ಬಂಧಿಸಿ ಕಠಿಣ ಶಿಕ್ಷೆ ವಿಧಿಸುವಂತೆ ಆಗ್ರಹಿಸಿ ದ್ರಾವಿಡ ಭೀಮಾ ಆರ್ಮಿಯಿಂದ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.

ದ್ರಾವಿಡ ಭೀಮಾ ಆರ್ಮಿಯಿಂದ ಪ್ರತಿಭಟನೆ

ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಬೂದಿಗಳ ಗ್ರಾಮದಲ್ಲಿ ದಲಿತ ಯುವಕ ಅನಿಲ್​ನನ್ನು ಗ್ರಾಮದ ಮಲ್ಲಿಕಾರ್ಜುನ ದೇವಸ್ಥಾನದಲ್ಲಿ ಸರಿಸಮನಾಗಿ ಕುಳಿತಿದ್ದಾನೆ ಎಂಬ ಕಾರಣಕ್ಕೆ ಕೊಲೆ ಮಾಡಲಾಗಿದೆ. ತಕ್ಷಣವೇ ಅಪರಾಧಿಗಳನ್ನು ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು. ಅಲ್ಲದೆ ಕೊಲೆಗೀಡಾದ ಅನೀಲ್ ಕುಟುಂಬಕ್ಕೆ ಹೆಚ್ಚಿನ ಪರಿಹಾರ ಕೊಡಬೇಕು. ಆ ಕುಟುಂಬದ ಓರ್ವ ಸದಸ್ಯನಿಗೆ ಸರ್ಕಾರಿ ನೌಕರಿ ನೀಡಬೇಕು ಎಂದು ಆಗ್ರಸಿದರು.

ದಲಿತರ ಮೇಲಿನ ಇಂತಹ ದೌರ್ಜನ್ಯ, ಅಪರಾಧಗಳನ್ನು ತಡೆಯಲು ಮತ್ತು ಕಠಿಣ ಕ್ರಮ ವಹಿಸಲು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆಯನ್ನು ಮತ್ತಷ್ಟು ಬಲಗೊಳಿಸಬೇಕೆಂದು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು.

ABOUT THE AUTHOR

...view details