ಕರ್ನಾಟಕ

karnataka

ETV Bharat / state

ಕಾರು ಮೂರು ಪಲ್ಟಿಯಾದ್ರೂ ಛಲಬಿಡದ ಚಾಲಕ: ಎದೆ ಝಲ್ ಎನ್ನುವ ದೃಶ್ಯ - car race in sakaleshpur

ಸಕಲೇಶಪುರ ಹೊರವಲಯದಲ್ಲಿ ಆಯೋಜಿಸಲಾಗಿದ್ದ ಬೈಕ್ ಮತ್ತು ಕಾರು ಱಲಿಯಲ್ಲಿ ಭಾಗವಹಿಸಿದ್ದ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ಮೂರು ಪಲ್ಟಿಯಾಗಿದೆ. ಆದರೂ ಛಲಬಿಡದ ಚಾಲಕ ಮತ್ತೆ ಮೇಲೆದ್ದು ಕಾರನ್ನು ಚಲಾಯಿಸಿದ್ದಾರೆ.

dramatic scene of car race in sakaleshpur
ಮೂರು ಬಾರಿ ಪಲ್ಟಿಯಾದ ಕಾರು

By

Published : Mar 7, 2021, 1:56 PM IST

ಹಾಸನ/ ಸಕಲೇಶಪುರ:ಸಕಲೇಶಪುರದಲ್ಲಿ ನಡೆಯುತ್ತಿರುವ ಮೋಟಾರ್ ಕ್ರಾಸ್ ಬೈಕ್ ಮತ್ತು ಕಾರು ಱಲಿಯಲ್ಲಿ ಭಾಗವಹಿಸಿದ್ದ ಕಾರೊಂದು ಮೂರು ಬಾರಿ ಪಲ್ಟಿಯಾಗಿ ಮತ್ತೆ ಮುಂದೆ ಸಾಗಿದೆ.

ಮೂರು ಬಾರಿ ಪಲ್ಟಿಯಾದ ಕಾರು
ಸಕಲೇಶಪುರ ಹೊರವಲಯದ ಕಾಫಿ ತೋಟವೊಂದರಲ್ಲಿ ಆಯೋಜಿಸಲಾಗಿದ್ದ ಬೈಕ್ ಮತ್ತು ಕಾರು ಱಲಿಯಲ್ಲಿ ಭಾಗವಹಿಸಿದ್ದ ಮಾರುತಿ 800 ಕಾರು ಅತೀ ವೇಗವಾಗಿ ಬಂದು ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ಈ ದೃಶ್ಯ ನೆರೆದಿದ್ದ ಪ್ರೇಕ್ಷಕರ ಎದೆಯನ್ನ ಝಲ್ಲೆನ್ನಿಸಿದೆ. ಕಾರು ಪಲ್ಟಿ ಆದರೂ ಕೂಡ ಧೃತಿಗೆಡದ ಚಾಲಕ ಒಂದೆರಡು ನಿಮಿಷ ಸುಧಾರಿಸಿಕೊಂಡು ನಂತರ ಅದೇ ಕಾರನ್ನು ಚಲಾಯಿಸಿಕೊಂಡು ಹೋಗಿದ್ದಾರೆ. ಈ ದೃಶ್ಯ ಕಂಡು ಸ್ಥಳದಲ್ಲಿ ನೆರೆದಿದ್ದ ಪ್ರೇಕ್ಷಕರು ಆಶ್ಚರ್ಯಚಕಿತರಾಗಿದ್ದಾರೆ. ಸಣ್ಣಪುಟ್ಟ ಗಾಯಗಳಾದರೂ ಕೂಡ ಪಂದ್ಯದಲ್ಲಿ ಸೋಲಬಾರದು ಎಂಬ ಕಾರಣಕ್ಕೆ ಮತ್ತೆ ಅದೇ ವೇಗದಲ್ಲಿ ಚಾಲಕ ಕಾರು ಚಲಾಯಿಸಿದರೂ ಕೊನೆಗೆ ಸೋತಿದ್ದಾರೆ.
ಕಾರು ಪಲ್ಟಿ

ABOUT THE AUTHOR

...view details