ಹಾಸನ:ಉಪ ನೋಂದಣಾಧಿಕಾರಿಯಾಗಿದ್ದ ಡಾ.ಎಚ್.ಎಲ್. ನಾಗರಾಜ್ ಅವರನ್ನು ಸ್ಥಳ ತೋರಿಸದೆ ರಾಜ್ಯ ಸರ್ಕಾರ ದಿಢೀರ್ ವರ್ಗಾಯಿಸಿ ಆದೇಶ ಹೊರಡಿಸಿದ್ದು, ನೂತನ ಎಸಿಯಾಗಿ ಡಾ.ನವೀನ್‌ಭಟ್ ನೇಮಕಗೊಂಡಿದ್ದಾರೆ.
ಹಾಸನಾಂಬ ದೇಗುಲದ ವಿಶೇಷ ಆಡಳಿತಾಧಿಕಾರಿಯಾಗಿ ಡಾ.ಎಚ್.ಎಲ್. ನಾಗರಾಜ್ ನೇಮಕ - hasanamba temple latest news
ಹಾಸನಾಂಬ ಜಾತ್ರಾ ಮಹೋತ್ಸವ ಮುಗಿಯುವವರೆಗೆ ಅಂದರೆ ಅ.16 ರಿಂದ 30ರವರೆಗೆ ಹಾಸನಾಂಬ ದೇವಾಲಯದ ವಿಶೇಷ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.
![ಹಾಸನಾಂಬ ದೇಗುಲದ ವಿಶೇಷ ಆಡಳಿತಾಧಿಕಾರಿಯಾಗಿ ಡಾ.ಎಚ್.ಎಲ್. ನಾಗರಾಜ್ ನೇಮಕ](https://etvbharatimages.akamaized.net/etvbharat/prod-images/768-512-4776430-thumbnail-3x2-hsn.jpg)
ಜಿಲ್ಲೆಯ ನಾನಾ ತಾಲೂಕುಗಳಲ್ಲಿ ತಹಶೀಲ್ದಾರ್ ಅಗಿ ಕಾರ್ಯನಿರ್ವಹಿಸಿದ್ದ ಡಾ.ಎಚ್.ಎಲ್. ನಾಗರಾಜ್ ಉತ್ತಮ ಹೆಸರು ಪಡೆದಿದ್ದರು. ಅಲ್ಲದೆ ಕೆಲವು ವಾರಗಳ ಹಿಂದೆಷ್ಟೇ ಅಪರ ಜಿಲ್ಲಾಧಿಕಾರಿಯಾಗಿ ಹೆಚ್ಚುವರಿ ಜವಾಬ್ದಾರಿಯನ್ನೂ ಸಹ ವಹಿಸಿಕೊಂಡಿದ್ದರು.
ಜಿಲ್ಲೆಯಲ್ಲಿ ಪ್ರಸಿದ್ಧ ಹಾಗು ವರ್ಷದಲ್ಲಿ ಕೇವಲ 12 ದಿನಗಳ ಕಾಲ ಮಾತ್ರ ದರ್ಶನ ನೀಡುವ ಹಾಸನಾಂಬ ದೇವಿಯ ಜಾತ್ರಾ ಮಹೋತ್ಸವದ ಉಸ್ತುವಾರಿ ವಹಿಸಿಕೊಂಡಿದ್ದ ಹೆಚ್.ಎಲ್. ನಾಗರಾಜ್ ಅವರ ವರ್ಗಾವಣೆ ಖಂಡಿಸಿ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ ಹಿನ್ನಲೆಯಲ್ಲಿ, ಮಹೋತ್ಸವ ಮುಗಿಯುವವರೆಗೆ ಅಂದರೆ ಅ.16 ರಿಂದ 30ರವರೆಗೆ ಹಾಸನಾಂಬ ದೇವಾಲಯದ ವಿಶೇಷ ಆಡಳಿತಾಧಿಕಾರಿಯಾಗಿ ಕಾರ್ಯನಿರ್ವಹಿಸುವಂತೆ ಜಿಲ್ಲಾಧಿಕಾರಿ ಆರ್.ಗಿರೀಶ್ ಆದೇಶ ಹೊರಡಿಸಿದ್ದಾರೆ.