ಕರ್ನಾಟಕ

karnataka

ETV Bharat / state

ಮಗುವಿನ ಪ್ರಾಣ ತೆಗೆದ ಜೋಡಿ ಚುಚ್ಚುಮದ್ದು... ವೈದ್ಯರ ಎಡವಟ್ಟಿಗೆ 3 ತಿಂಗಳ ಮಗು ಸಾವು

ವೈದ್ಯರು ನೀಡಿದ ಚುಚ್ಚುಮದ್ದೊಂದರ ಪರಿಣಾಮವಾಗಿ ಮಗು ಮೃತಪಟ್ಟಿರುವ ಘಟನೆ ಹಾಸನದಲ್ಲಿ ನಡೆದಿದೆ.

ವೈದ್ಯರ ಎಡವಟ್ಟು ಮೂರು ತಿಂಗಳ ಮಗು ಸಾವು

By

Published : Apr 17, 2019, 7:39 PM IST

ಹಾಸನ : ವೈದ್ಯರ ಎಡವಟ್ಟಿನಿಂದ ಮೂರು ತಿಂಗಳ ಮಗುವೊಂದು ಸಾವಿಗೀಡಾದ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಜಿಲ್ಲೆಯ ಹೊಳೆನರಸೀಪುರ ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ಈ ಘಟನೆ ನಡೆದಿದೆ. ತಾಲೂಕಿನ ಕಟ್ಟೆ ಬೆಳಗುಲಿ ಗ್ರಾಮದ ದೇವರಾಜು ಮತ್ತು ಚಂದು ದಂಪತಿಯ ಮಗು ಸಾವಿಗೀಡಾದ ಮೃತ ಕಂದಮ್ಮ.

ಮೂರು ತಿಂಗಳ ಮಗು ಸಾವು

ನಿನ್ನೆ ಮಧ್ಯಾಹ್ನ ಮಗುವಿಗೆ ಜ್ವರ ಬಂದಿದೆ ಎಂಬ ಕಾರಣಕ್ಕೆ ಹೊಳೆನರಸೀಪುರದ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಯಿತು. ಬಳಿಕ ವೈದ್ಯರೋಬ್ಬರು ಮಗುವಿಗೆ ಎರಡು ಚುಚ್ಚುಮದ್ದು ನೀಡಿದ್ದರಿಂದ ಮಗು ನಿದ್ರೆಗೆ ಜಾರಿದೆ. ಇಂದು ಬೆಳಗ್ಗೆ ಮಗು ವಾಂತಿ ಮಾಡಲು ಪ್ರಾರಂಭಿಸಿದೆ. ಮಗುವಿನ ಆರೋಗ್ಯದ ಬಗ್ಗೆ ಪೋಷಕರು ರಾತ್ರಿ ಪಾಳಯದಲ್ಲಿದ್ದ ವೈದ್ಯರೋಬ್ಬರಿಗೆ ತಿಳಿಸಿದ ಕೆಲವೇ ಹೊತ್ತಿನಲ್ಲಿ ಮಗು ಸಾವನ್ನಪ್ಪಿದೆ.

ವೈದ್ಯರು ನೀಡಿದ ಎರಡು ಚುಚ್ಚುಮದ್ದಿನ ಪರಿಣಾಮವೇ ಮಗು ಸಾವಿಗೆ ಕಾರಣ ಎಂಬುದು ಮಗುವಿನ ಪೋಷಕರಾದ ಚಂದು ಮತ್ತು ತಾತ ಕಾಳಯ್ಯನವರ ಆರೋಪ.

ಬೆಳಗ್ಗೆಯಿಂದಲೂ ಕೂಡಾ ಸಾವೀಗೀಡಾದ ಮಗುವಿನ ಮೃತದೇವನ್ನಿಟ್ಟು ಪೋಷಕರು ಆಸ್ಪತ್ರೆ ಮುಂಭಾಗದಲ್ಲಿ ಪ್ರತಿಭಟನೆ ಮಾಡುತಿದ್ದಾರೆ. ಆದರೆ ಎಡವಟ್ಟು ಮಾಡಿದ ವೈದ್ಯರಾಗಲಿ ಸಂಬಂಧಪಟ್ಟವರಾಗಲಿ ಸ್ಥಳಕ್ಕಾಗಮಿಸಿ ಸಾತ್ವಂನ ಹೇಳಿಲ್ಲ.

ವಿಪರ್ಯಾಸವೆಂದರೆ ಚಂದುವಿನ ಮೊದಲ ಮಗು ಕೂಡಾ ಗರ್ಭಾವಸ್ಥೆಯಲ್ಲಿ ತೀರಿಕೊಂಡಿತ್ತು, ಎರಡನೇ ಮಗುವನ್ನು ಈ ರೀತಿ ಸಾಯಿಸಿದರು ಎಂಬುದು ಕೂಡಾ ಹೆತ್ತವರ ಆರೋಪ.

ABOUT THE AUTHOR

...view details