ಹಾಸನ: ಗ್ರಾಮದಲ್ಲಿ ಮದ್ಯದಂಗಡಿ ತೆರೆಯಲು ಅವಕಾಶ ಕೊಡದಂತೆ ಒತ್ತಾಯಿಸಿ ತಾಲೂಕಿನ ಗಾಡೇನಹಳ್ಳಿಯ ಸ್ತ್ರೀಶಕ್ತಿ ಮತ್ತು ಸ್ವಸಹಾಯ ಸಂಘಗಳ ಮಹಿಳೆಯರು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದಾರೆ.
ಗಾಡೇನಹಳ್ಳಿ ಗ್ರಾಮದಿಂದ ಹಾಸನಕ್ಕೆ ಹಾದು ಹೋಗುವ ರಸ್ತೆ ಪಕ್ಕದಲ್ಲಿ 8 ಗುಂಟೆ ಜಮೀನಿನಲ್ಲಿ ಅನಿಲ್ ಕುಮಾರ್ ಎಂಬುವವರು ಬಾರ್ ಮತ್ತು ರೆಸ್ಟೋರೆಂಟ್ ತೆರೆಯುವುದಾಗಿ ಊರಿನ ಹಿರಿಯರು ಮತ್ತು ಕೆಲವರಿಗೆ ಮಾತ್ರ ತಿಳಿಸಿದ್ದಾರೆ ಎಂದು ಮಹಿಳೆಯರು ದೂರಿದರು. ಆದರೆ ಇವರು ಮದ್ಯದ ಅಂಗಡಿ ತೆರೆಯುವ ಸ್ಥಳದ ಎದುರಿಗೆ ಪ್ರಸಿದ್ಧ ಕುಂಟು ಮಾರಮ್ಮ ಎಂಬ ದೇವಸ್ಥಾನ, ಪಕ್ಕದಲ್ಲಿ ಒಂದು ಮಹಿಳಾ ಬೆಥನಿ ವಿದ್ಯಾ ಶಿಕ್ಷಣ ಸಂಸ್ಥೆ ಇದೆ. ಅದೇ ಮಾರ್ಗದಲ್ಲಿ ಚರ್ಚ್ ಮತ್ತು ಪೊಲೀಸ್ ತರಬೇತಿ ಶಾಲೆಯಿದ್ದು, ಮದ್ಯದ ಅಂಗಡಿ ಪ್ರಾರಂಭವಾದರೆ ಎಲ್ಲರಿಗೂ ತೊಂದರೆಯಾಗಲಿದೆ ಎಂದಿದ್ದಾರೆ.