ಹಾಸನ: ಅನ್ನಭಾಗ್ಯ, ಕ್ಷೀರ ಭಾಗ್ಯ ಕೊಟ್ಟಿದ್ದಷ್ಟೇ ಅಲ್ಲದೇ ಕೊರೊನಾ ಸಂಕಷ್ಟದಲ್ಲಿ ರಾಜ್ಯದ ಜನರ ಧ್ವನಿಯಾಗಿ ನಿಂತಿದ್ದು ಕಾಂಗ್ರೆಸ್. ಕೈ ನೊಂದವರ ಆಶಾಕಿರಣವಾಗುತ್ತದೆಯೇ ಹೊರತು ಯಾವತ್ತೂ ಭರವಸೆಗಳನ್ನು ಕೊಟ್ಟು ಹಿಂದೆ ಸರಿಯುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು. ಆಲೂರಿನಲ್ಲಿ ನಡೆದ ಪ್ರಜಾಧ್ವನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಡಬಲ್ ಇಂಜಿನ್ ಸರ್ಕಾರದಿಂದ ರಾಜ್ಯಕ್ಕೆ ಯಾವುದೇ ಅನುಕೂಲ ಆಗಿಲ್ಲ. ರೈತರ ಆದಾಯ ಡಬಲ್ ಮಾಡ್ತೀವಿ ಅಂತ ಸುಳ್ಳು ಭರವಸೆ ಕೊಟ್ರು.
ಹಾಸನದಲ್ಲಿ ಸಮಸ್ಯೆಗಳು ಸಾಕಷ್ಟು ಜೀವಂತವಾಗಿ ಇವೆ. ಮಲೆನಾಡು ಭಾಗದಲ್ಲಿ ಆನೆ ದಾಳಿಗೆ 78 ಮಂದಿ ಸಾವಿಗೀಡಾಗಿದ್ದಾರೆ. ಆದರೆ ಪರಿಹಾರ ಮಾತ್ರ ಇನ್ನೂ ಸರಿಯಾಗಿ ಸಿಕ್ಕಿಲ್ಲ. ಅತಿವೃಷ್ಟಿ, ಅನಾವೃಷ್ಟಿ ಮತ್ತು ಕೋವಿಡ್ ಸಂದರ್ಭದಲ್ಲಿ ಜನರ ಕಷ್ಟ ಕೇಳೋದಕ್ಕೆ ಮೋದಿ ಬರ್ಲಿಲ್ಲ. ಜನರ ಸಂಕಷ್ಟಕ್ಕೆ ಜನರ ಮನೆ ಬಾಗಿಲಿಗೆ ಕಾಂಗ್ರೆಸ್ ಭೇಟಿ ನೀಡಿ ಸಮಸ್ಯೆ ಆಲಿಸಿತು. ಆದರೆ ಮೋದಿ ಯಡಿಯೂರಪ್ಪನವರ ಬರ್ತ್‌ಡೆಗೆ ಬರ್ತಾರೆ ಎಂದು ಹರಿಹಾಯ್ದರು.