ಕರ್ನಾಟಕ

karnataka

ETV Bharat / state

ನನ್ನ ಮುಂದಾಳತ್ವ, ಸಾಮೂಹಿಕ ನಾಯಕತ್ವದೊಂದಿಗೆ ಮುಂದಿನ ಚುನಾವಣೆ ಎದುರಿಸುತ್ತೇವೆ: ಡಿ ಕೆ ಶಿವಕುಮಾರ್ - ಮುಂದಿನ ಚುನಾವಣೆ ಬಗ್ಗೆ ಡಿಕೆ ಶಿವಕುಮಾರ್ ಹೇಳಿಕೆ

ನನ್ನ ಮುಂದಾಳತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಉತ್ತಮ ಸರ್ಕಾರ ನೀಡಿದ್ದೆವು ಎಂದು ಹಾಸನ ಜಿಲ್ಲೆಯ ಅರಕಲಗೂಡಿನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದರು.

ಡಿಕೆ ಶಿವಕುಮಾರ್
ಡಿಕೆ ಶಿವಕುಮಾರ್

By

Published : Dec 25, 2021, 6:44 AM IST

ಹಾಸನ: ಸಿದ್ದರಾಮಯ್ಯ ನೇತೃತ್ವದಲ್ಲಿ ನಾವು ಉತ್ತಮ ಸರ್ಕಾರ ನೀಡಿದ್ದೆವು. ಈಗ ನನ್ನ ಮುಂದಾಳತ್ವದಲ್ಲೇ ಮುಂದಿನ ಚುನಾವಣೆ ಎದುರಿಸುತ್ತೇನೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆಗೆ ಹೋಗುತ್ತೇವೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಎಲ್ಲ ಸಮುದಾಯಕ್ಕೂ ಅಧಿಕಾರ ನೀಡುತ್ತೇವೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಹೇಳಿದ್ರು.

ಜಿಲ್ಲೆಯ ಅರಕಲಗೂಡಿನಲ್ಲಿ ಮಾತನಾಡಿದ ಅವರು, ನಾನು ಕಷ್ಟದಲ್ಲಿದ್ದಾಗ ನೀವೆಲ್ಲರೂ ಬೆಂಬಲ ಸೂಚಿಸಿ ಹೋರಾಟ ಮಾಡಿದ್ದೀರಿ. ತಿಹಾರ್​ ಜೈಲಿಗೆ ಹೋದಾಗ ಹೋರಾಟ ಮಾಡಿ ಹೊರ ತಂದಿದ್ದೀರಿ. ನಿಮ್ಮ ಪ್ರೀತಿ ವಿಶ್ವಾಸವನ್ನು ನಾನು ಕೊನೆವರೆಗೂ ಮರೆಯುವುದಿಲ್ಲ ಎಂದರು.

ಅರಕಲಗೂಡಿನಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್

ಮೇಕೆದಾಟು ಹೋರಾಟ ಕೇವಲ ಕಾಂಗ್ರೆಸ್ ಕಾರ್ಯಕ್ರಮವಲ್ಲ. ಮೇಕೆದಾಟು ಯೋಜನೆ ಜಾರಿಗೆ ಪಕ್ಷಾತೀತವಾಗಿ ಹೋರಾಟ ಮಾಡಬೇಕು. ಸಿದ್ದರಾಮಯ್ಯ ಸಿಎಂ ಆಗಿದ್ದಾಗ ಮೇಕೆದಾಟು ಯೋಜನೆಗೆ ಡಿಪಿಆರ್ ಮಾಡಿಸಲಾಗಿತ್ತು. ನಾನು ಜಲಸಂಪನ್ಮೂಲ ಸಚಿವನಾಗಿದ್ದಾಗ ಡಿಪಿಆರ್​ ಮಾಡಿದ್ದೆವು. ಆದ್ರೆ ಬಿಜೆಪಿ ಸರ್ಕಾರ ಮೇಕೆದಾಟು ಯೋಜನೆ ಬಗ್ಗೆ ಗಮನಿಸ್ತಿಲ್ಲ. ಮೇಕೆದಾಟು ಯೋಜನೆ ಜಾರಿಯಾದ್ರೆ ನೀರಿನ ಸಮಸ್ಯೆ ಪರಿಹಾರ ಆಗುತ್ತೆ. ಬೆಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗುತ್ತದೆ. ಕೇಂದ್ರ ಸರ್ಕಾರ ಅನುಮತಿ ನೀಡಿದ್ರೆ ಯೋಜನೆ ಮಾಡಬಹುದು. ಮೇಕೆದಾಟು ಯೋಜನೆ ಜಾರಿಗೆ ಒತ್ತಾಯಿಸಿ ಪಾದಯಾತ್ರೆ ಮಾಡುತ್ತೇವೆ. ಈ ಹೋರಾಟಕ್ಕೆ ಪ್ರತಿಯೊಬ್ಬರೂ ಬೆಂಬಲಿಸುವಂತೆ ಮನವಿ ಮಾಡಿದರು.

ಮತಾಂತರ ನಿಷೇಧ ಕಾಯ್ದೆ ಕುರಿತು ಗರಂ ಆದ ಡಿ.ಕೆ. ಶಿವಕುಮಾರ್, ನಮ್ಮ ಸರ್ಕಾರ ಒಪ್ಪಿದ್ದರೆ ಸಂಪುಟದಲ್ಲಿ ನಾವು ತರುತ್ತಿದ್ದೆವು. ನಾವು ಒಪ್ಪಿರಲಿಲ್ಲ, ಅದು ಸರಿ ಇಲ್ಲ ಎಂದು ತಿರಸ್ಕರಿದ್ದೆವು ಎಂದು ಡಿಕೆಶಿ ಹೇಳಿದ್ರು.

ಮುಂದಿನ ಸಿಎಂ ಡಿಕೆಶಿ ಎಂದು ಘೋಷಣೆ ಕೂಗಿದ ಅಭಿಮಾನಿಗಳಿಗೆ ಕ್ಲಾಸ್ ತೆಗೆದುಕೊಂಡ ಶಿವಕುಮಾರ್, ಸಿಎಂ ಆಮೇಲೆ ಮೊದಲು ವೋಟ್ ಹಾಕ್ರೋ. ಇಲ್ಲಿ ಕಾಂಗ್ರೆಸ್ ಅನ್ನು ಮೊದಲು ಗೆಲ್ಲಿಸಿ ಅಂದ್ರು.

ABOUT THE AUTHOR

...view details