ಹಾಸನ:ಡಿವೋರ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ, ಎದುರಾಳಿ ಕಕ್ಷಿದಾರರ ಕಡೆಯವರು ಪ್ರಕರಣದ ವಕಾಲತು ವಹಿಸಿದ್ದ ವಕೀಲರ ಮೇಲೆ ಹಲ್ಲೆ ಮಾಡಿರುವ ಘಟನೆ ಅರಸೀಕೆರೆಯಲ್ಲಿ ನಡೆದಿದೆ.
ಪುರುಷೋತ್ತಮ ಹಾಗೂ ಬಿಂದುಶ್ರೀ ಎಂಬುವರ ನಡುವೆ ವಿಚ್ಚೇದನ ಪ್ರಕರಣಕ್ಕೆ ಸಂಬಂಧಿಸಿದಂತೆ ಅರಸೀಕೆರೆ ಸಿವಿಲ್ ನ್ಯಾಯಾಲಯಕ್ಕೆ ಹಾಜರಾಗಿ ಹೊರಬಂದ ಸಂದರ್ಭದಲ್ಲಿ, ಪುರುಷೋತ್ತಮ್ ಎಂಬುವರ ಮೇಲೆ ಬಿಂದುಶ್ರೀ ಸಂಬಂಧಿಕರು ಪುರುಷೋತ್ತಮ್ರನ್ನು ಕಿಡ್ನಾಪ್ ಮಾಡಲು ಯತ್ನಿಸಿದ್ದಾರೆ. ಅದನ್ನು ತಡೆಯಲು ಹೋದ ಪುರುಷೋತ್ತಮ್ ಪರ ವಕೀಲ ಪ್ರಸಾದ್ ಮೇಲೂ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ.